ಬಾಗಲಕೋಟೆ: ಮೂವರು ವೈದ್ಯ ದಂಪತಿ ಸೇರಿದಂತೆ 16 ಮಂದಿಯ ಮೇಲೆ ನಿಗಾ
Update: 2020-03-14 22:57 IST
ಬಾಗಲಕೋಟೆ, ಮಾ.14: ಕೊರೋನ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ನಗರಕ್ಕೆ ವಿದೇಶದಿಂದ ಮರಳಿದ್ದ ಮೂವರು ವೈದ್ಯ ದಂಪತಿ ಸೇರಿ 16 ಮಂದಿಯನ್ನು ನಿಗಾದಲ್ಲಿ (ಕ್ವಾರೆಂಟೈನ್) ಇಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಂತ ದೇಸಾಯಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಳಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಮೂವರು ವೈದ್ಯ ದಂಪತಿ ಸೇರಿದಂತೆ ಒಟ್ಟು ಎಂಟು ಮಂದಿ ದುಬೈಗೆ ತೆರಳಿದ್ದರು. ಮಾ.13ರಂದು ನಗರಕ್ಕೆ ಹಿಂತಿರುಗಿದ್ದ ಅವರನ್ನು ಮುಂದಿನ 14 ದಿನಗಳ ಕಾಲ ಮನೆ ಬಿಟ್ಟು ಹೊರಗೆ ಹೋಗದಂತೆ ಸೂಚಿಸಿ ಅವರ ಮೇಲೆ ವೈದ್ಯಕೀಯ ನಿಗಾ ವಹಿಸಲಾಗಿದೆ. ಅಲ್ಲದೇ, ಇಲ್ಲಿಯವರೆಗೆ ಜಿಲ್ಲೆಯಲ್ಲಿ ವಿದೇಶದಿಂದ ಮರಳಿದ 16 ಮಂದಿಯ ಮೇಲೆ ನಿಗಾ ಇಡಲಾಗಿದೆ.