×
Ad

ಕಲಬುರಗಿ: ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ ; ಸ್ಥಳದಲ್ಲಿಯೇ ಇಬ್ಬರು ಮೃತ್ಯು

Update: 2020-03-15 10:50 IST

ಕಲಬುರಗಿ: ನಿಂತಿದ್ದ ಲಾರಿಗೆ ಹಿಂದಿನಿಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೇಡಂ ರಸ್ತೆಯ ಮಾಡಬೂಳ ಬಳಿ ನಡೆದಿದೆ.

ಬೈಕ್ ಸವಾರ ಬಸವರಾಜ್ ಕೆಸರಟಗಿ (35), ಹಿಂಬದಿ ಸವಾರ ನಾಗಣ್ಣ ಮಳಖೇಡ ( 32 ) ಮೃತರು ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ಕಲಬುರಗಿಯಿಂದ ಮಳಖೇಡಗೆ ಹೊರಟ್ಟಿದ ಇಬ್ಬರು ಬೈಕ್ ಸವಾರರು ಮಾಡಬೂಳ ಹತ್ತಿರ ನಿಂತಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.

ಲಾರಿ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಮಾಡಬೂಳ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News