ಕೊರೋನಾ ವೈರಸ್ ಭೀತಿ: ಕೆಎಸ್ಸಾರ್ಟಿಸಿಗೆ 1.85 ಕೋಟಿ ರೂ.ನಷ್ಟ
Update: 2020-03-15 17:31 IST
ಬೆಂಗಳೂರು, ಮಾ.15: ಕೊರೋನಾ ಸೋಂಕು ಹರಡುತ್ತಿದೆ ಎಂಬ ಆತಂಕದ ಹಿನ್ನೆಲೆ ಪ್ರಯಾಣಿಕರು ಕೆಎಸ್ಸಾರ್ಟಿಸಿ ಸಾರಿಗೆ ವ್ಯವಸ್ಥೆಯನ್ನು ಬಳಸಲು ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಎರಡು ವಾರಗಳಿಂದ ಸಂಸ್ಥೆ ಬೊಕ್ಕಸಕ್ಕೆ 1.85 ಕೋಟಿ ರೂ.ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಕೊರೋನಾ ಸೋಂಕು ಭೀತಿಯಿಂದ 14 ದಿನಗಳಿಂದ ಕೆಎಸ್ಸಾರ್ಟಿಸಿಯ ಎಸಿ ಸ್ಲೀಪರ್, ಕ್ಲಬ್ ಕ್ಲಾಸ್, ಫ್ಲೈ ಬಸ್‌ಗಳಲ್ಲಿ ಪ್ರಯಾಣಿಸಲು ಸಾರ್ವಜನಿಕ ಪ್ರಯಾಣಿಕರು ಹಿಂಜರಿಯುತ್ತಿದ್ದಾರೆ. ಹೀಗಾಗಿ ಕೆಎಸ್ಸಾರ್ಟಿಸಿಯ ಬಸ್‌ಗಳ ಪ್ರಮುಖ ಮಾರ್ಗಗಳಾದ ಹೈದರಾಬಾದ್, ತಿರುಪತಿ, ಚೆನ್ನೈ, ಕೊಯಮತ್ತೂರು, ಮಂತ್ರಾಲಯ, ಊಟಿ, ಕೊಡೈಕೆನಾಲ್, ಪಣಜಿ ಮಾರ್ಗಗಳಲ್ಲಿ ತೆರಳುವ 92ಕ್ಕೂ ಹೆಚ್ಚಿನ ಪ್ರೀಮಿಯಂ ಬಸ್‌ಗಳ ಸೇವೆ ರದ್ದು ಮಾಡಲಾಗಿದೆ.
ಕೊರೋನಾ ಆತಂಕದಿಂದ ಬಿಎಂಟಿಸಿಗೆ 70ಲಕ್ಷ ರೂ.ಆದಾಯ ನಷ್ಟವಾಗಿದ್ದು, ನಮ್ಮ ಮೆಟ್ರೋ ಆದಾಯದಲ್ಲಿ ಸುಮಾರು 40ಲಕ್ಷ ರೂ.ಆದಾಯ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.