ಜಿಲ್ಲೆಯಲ್ಲಿ ಯಾವುದೆ ಕೊರೋನ ಪ್ರಕರಣ ಇಲ್ಲ: ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್

Update: 2020-03-15 15:09 GMT

ಧಾರವಾಡ, ಮಾ.15: ಮಕ್ಕಾ, ಮದೀನಾಗೆ ತೆರಳಿ ಉಮ್ರಾ ಯಾತ್ರೆ ಕೈಗೊಂಡು ವ್ಯಕ್ತಿಯೊಬ್ಬರು, ನಿನ್ನೆ(ಮಾ.14) ಸಂಜೆ ಧಾರವಾಡ ನಗರಕ್ಕೆ ಮರಳಿ ಬಂದಿದ್ದರು. ಅವರು ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದುದರಿಂದ, ಕೋವಿಡ್ 19(ಕೊರೋನ) ಪ್ರಕರಣ ಸಂಶಯದ ಹಿನ್ನೆಲೆಯಲ್ಲಿ ಸಂಜೆಯೆ ಮಾದರಿ ಸಂಗ್ರಹಿಸಿ, ಶಿವಮೊಗ್ಗದ ವಿಆರ್‌ಡಿಎಲ್ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಇಂದು( ಮಾ.15 ) ಸಂಜೆ ಪ್ರಯೋಗಾಲಯದ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ಇದುವರೆಗೆ ಎರಡು ಪ್ರಯೋಗಾಲಯದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಎರಡೂ ಪ್ರಕರಣಗಳಲ್ಲಿ ನೆಗೆಟಿವ್ ವರದಿಗಳು ಬಂದಿವೆ ಎಂದು ಅವರು ಹೇಳಿದ್ದಾರೆ.

ಜಿಲ್ಲೆಯಾದ್ಯಂತ ಕೊರೋನಾ ವೈರಸ್ ತಡೆಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು, ಭಯ ಭೀತಿಗೆ ಒಳಗಾಗಬಾರದು, ಸ್ವಚ್ಛತಾ ಹಾಗೂ ಅನುಸರಣಾ ಕ್ರಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News