ಫ್ರಾನ್ಸ್‌ನಲ್ಲಿ ‘ವೇಗವಾಗಿ ಹದಗೆಡುತ್ತಿರುವ’ ಆರೋಗ್ಯ ಪರಿಸ್ಥಿತಿ

Update: 2020-03-16 16:38 GMT

ಪ್ಯಾರಿಸ್, ಮಾ. 16: ಫ್ರಾನ್ಸ್‌ನಲ್ಲಿ ಕೊರೋನವೈರಸ್ ಕಾಯಿಲೆ ಪರಿಸ್ಥಿತಿ ‘ಅತ್ಯಂತ ಚಿಂತಾಜನಕವಾಗಿದೆ’ ಹಾಗೂ ‘ವೇಗವಾಗಿ ಹದಗೆಡುತ್ತಿದೆ’ ಎಂದು ದೇಶದ ಆರೋಗ್ಯ ಸೇವೆಯ ಮುಖ್ಯಸ್ಥರು ಸೋಮವಾರ ಹೇಳಿದ್ದಾರೆ.

 ‘‘ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಪ್ರತಿ ಮೂರು ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದೆ’’ ಎಂದು ‘ಫ್ರಾನ್ಸ್ ಇಂಟರ್’ ಟಿವಿ ಚಾನೆಲ್‌ನಲ್ಲಿ ಮಾತನಾಡಿದ ಜೆರೋಮ್ ಸ್ಯಾಲೊಮನ್ ನುಡಿದರು.

‘‘ನಮ್ಮಲ್ಲಿ ಕೊರೋನವೈರಸ್ ಸೋಂಕಿಗೆ ಒಳಗಾಗಿರುವ ಜನರಿದ್ದಾರೆ, ಅವರು ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಇದ್ದಾರೆ ಹಾಗೂ ಅವರು ನೂರಾರು ಸಂಖ್ಯೆಯಲ್ಲಿದ್ದಾರೆ ಎನ್ನುವುದನ್ನು ನಮ್ಮ ಪ್ರಜೆಗಳು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ’’ ಎಂದರು.

ಫ್ರಾನ್ಸ್‌ನಲ್ಲಿ ಕೊರೋನವೈರಸ್‌ನಿಂದಾಗಿ ಈವರೆಗೆ 127 ಸಾವುಗಳು ಸಂಭವಿಸಿವೆ ಹಾಗೂ ಖಚಿತಪಟ್ಟ ಒಟ್ಟು 5,423 ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 36 ಸಾವುಗಳು ಮತ್ತು 900ಕ್ಕೂ ಅಧಿಕ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.

‘‘ಸೋಂಕು ಹರಡುವ ವೇಗವು ಅಪಾಯಕಾರಿ ಪ್ರಮಾಣದಲ್ಲಿದೆ ಹಾಗೂ ಇದರಿಂದಾಗಿ ಆಸ್ಪತ್ರೆಗಳಲ್ಲಿ ಹೊಸ ರೋಗಿಗಳಿಗೆ ಸ್ಥಳ ಸಿಗುವುದು ಕಷ್ಟವಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಶ್ರಮಿಸುತ್ತಿದ್ದೇವೆ’’ ಎಂದು ಸ್ಯಾಲೊಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News