ಕಿರಾಣಿ ಅಂಗಡಿಗೆ ಅಕ್ಕಿ ಸಾಗಿಸಿದ ಆರೋಪ: ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಶಿಕ್ಷಕ ಅಮಾನತು

Update: 2021-03-12 12:31 GMT

ಕೊಪ್ಪಳ, ಮಾ.16: ಸರಕಾರಿ ಶಾಲೆಯ ಮಕ್ಕಳ ಬಿಸಿಯೂಟದ ಅಕ್ಷರ ದಾಸೋಹ ಯೋಜನೆಯಡಿ ಪೂರೈಕೆಯಾದ ಅಕ್ಕಿಯನ್ನು ಕಿರಾಣಿ ಅಂಗಡಿಗೆ ಸಾಗಿಸಿ ಯೋಜನೆ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದ ಆರೋಪ ಕೇಳಿಬಂದ ಹಿನ್ನೆಲೆ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದ ಶಿಕ್ಷಕರನೋರ್ವನನ್ನು ಶಿಕ್ಷಣ ಇಲಾಖೆ ಅಮಾನತ್ತು ಮಾಡಿ ಅದೇಶ ಹೊರಡಿಸಿದೆ.

ಗಂಗಾವತಿಯ ಪ್ರಾಪರ್ ಶಾಲೆಯ ಮುಖ್ಯ ಶಿಕ್ಷಕ ತಾವರೆಪ್ಪ ಕಾರಬಾರಿ ಎಂಬವರು ಅಮಾನತುಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಶಿಕ್ಷಣ ಇಲಾಖೆಯಿಂದ 2014ರಲ್ಲಿ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದ ತಾವರೆಪ್ಪ ಕಾರಬಾರಿ, ಅಕ್ಷರ ದಾಸೋಹದ ಯೋಜನೆಯಡಿ ಪೂರೈಕೆಯಾದ ಅಕ್ಕಿಯನ್ನು ಮೂರು ಕ್ವಿಂಟಾಲ್ ಪ್ರಮಾಣದಷ್ಟು ಕಿರಾಣಿ ಅಂಗಡಿಗೆ ಸಾಗಿಸಿ ಯೋಜನೆ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದ ಗುರುತರ ಆರೋಪ ಕೇಳಿಬಂದಿತ್ತು.

ಈ ಸಂಬಂಧ ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಈ ಆರೋಪ ಸಾಬೀತಾದ ಹಿನ್ನೆಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅಮಾನತು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News