ಮಾ. 31ರವರೆಗೆ ಕರ್ನಾಟಕದಲ್ಲಿ ಸಭೆ, ಸಮಾರಂಭ, ಸಿನಿಮಾ, ಮಾಲ್-ಪಬ್ ಗಳಿಗೆ ನಿರ್ಬಂಧ ಮುಂದುವರಿಕೆ : ಸಿಎಂ
Update: 2020-03-18 16:02 IST
ಬೆಂಗಳೂರು : ಕೊರೋನಾ ವೈರಸ್ ಭೀತಿಯಿಂದ ಕರ್ನಾಟಕ ರಾಜ್ಯಾದ್ಯಂತ ಮಾ. 31ರವರೆಗೆ ಸಾರ್ವಜನಿಕ ಸಭೆ, ಸಮಾರಂಭಗಳು, ಮದುವೆಗಳು, ಸಿನಿಮಾ ಪ್ರದರ್ಶನ, ಮಾಲ್ ಗಳು, ಪಬ್ ಗಳ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಬಂಧ ಮುಂದುವರಿಸಿ ಆದೇಶ ನೀಡಿದ್ದಾರೆ.
ವಿಧಾನಸೌಧ, ವಿಕಾಸಸೌಧಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲು ಈ ಸಂದರ್ಭ ತೀರ್ಮಾನಿಸಲಾಗಿದೆ.
ವಿವಿಧ ದೇಶಗಳಿಂದ ಬರುವ ಪ್ರಯಾಣಿಕರ ತಪಾಸಣೆ ಕಡ್ಡಾಯ ಮಾಡಲಾಗಿದೆ. ಮಾ.31ರವರೆಗೆ ಈಗಿರುವ ನಿರ್ಬಂಧಗಳು ಮುಂದುವರೆಯಲಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.