×
Ad

ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪ: ಡೈಲಿ ಹಂಟ್ ಉರ್ದು ಮಾಧ್ಯಮ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು

Update: 2020-03-18 16:15 IST

ಕಲಬುರಗಿ: ಕೊರೋನಾ ವೈರಸ್ ನಿಂದ ಮೃತಪಟ್ಟ ಕಲಬುರಗಿ ವಯೋವೃದ್ಧರಿಗೆ ಚಿಕಿತ್ಸೆ ನೀಡಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಾರೆನ್ನಲಾಗಿದ್ದು, ಸುದ್ದಿ ಮಾಧ್ಯಮದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಒತ್ತಾಯಿಸಿದ್ದಾರೆ.

ವೈದ್ಯರೋಬ್ಬರಲ್ಲಿ ಕೋವಿಡ್-19 ವೈರಸ್ ಇರುವುದರ ಬಗ್ಗೆ ದೃಢಪಟ್ಟಿರುವ ವರದಿಯನ್ನು ತಿರುಚಿ ಪ್ರಸಾರ ಮಾಡಿ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಗೆ ಕಾರಣರಾದ ಡೈಲಿ ಹಂಟ್ ಉರ್ದು ನ್ಯೂಸ್ ವಿರುದ್ಧ ತಕ್ಷಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೂರು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News