ಮ್ಯಾಕ್ಸಿಕ್ಯಾಬ್‌ಗಳ ತೆರಿಗೆ ಇಳಿಕೆಗೆ ಸಿಎಂ ಜತೆ ಚರ್ಚೆ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

Update: 2020-03-18 12:30 GMT

ಬೆಂಗಳೂರು, ಮಾ. 18: ಮ್ಯಾಕ್ಸಿಕ್ಯಾಬ್‌ಗಳ ಆಸನಗಳ ಸಾಮರ್ಥ್ಯವನ್ನು 12ರಿಂದ 20 ಆಸನಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ನೋಂದಣಿ ಶುಲ್ಕ ಇಳಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯೆ ರೂಪಾಲಿ ಸಂತೋಷ್ ನಾಯ್ಕೆ ಪ್ರಶ್ನೆಗೆ ಉತ್ತರ ನೀಡಿದ ಅವರು, ಮ್ಯಾಕ್ಸಿ ಕ್ಯಾಬ್‌ಗಳ ಆಸನ ಸಾಮರ್ಥ್ಯ 12ಕ್ಕಿಂತ ಹೆಚ್ಚು ಹಾಗೂ 20 ಆಸನಗಳನ್ನು ಮೀರಿದ ವಾಹನಗಳಿಗೆ ಪ್ರತಿ ಆಸನಗಳ ಸಂಖ್ಯೆ ಪ್ರತಿ ತ್ರೈಮಾಸಿಕ 900 ರೂ.ಪ್ರತ್ಯೇಕ ತೆರಿಗೆ ವಿಧಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ರಘುಪತಿ ಭಟ್, 12ಕ್ಕೂ ಹೆಚ್ಚು ಆಸನ ಸಾಮರ್ಥ್ಯದ ಮ್ಯಾಕ್ಸಿಕ್ಯಾಬ್‌ಗಳನ್ನು 20 ಆಸನಗಳಿಗೆ ಮೀರದಂತೆ ಹೆಚ್ಚಿಸಬೇಕು. ಅಲ್ಲದೆ, ತೆರಿಗೆ ಕಡಿಮೆ ಮಾಡುವ ಸಂಬಂಧ ಈಗಾಗಲೇ ಸಿಎಂಗೆ ಮನವಿ ಮಾಡಿದ್ದು, ಇದರಿಂದ ಮ್ಯಾಕ್ಸಿಕ್ಯಾಬ್ ಮಾಲಕರು ಮತ್ತು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News