ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲದಿಂದ ಐವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಅನುಮೋದನೆ
Update: 2020-03-19 14:52 IST
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲು ಸಲ್ಲಿಸಿದ ಪ್ರಸ್ತಾವನೆಯನ್ನು ರಾಷ್ಟ್ರಪತಿ ಅನುಮೋದಿಸಿದ್ದಾರೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎಂ.ಮಹೇಶ್ವರಯ್ಯಅವರು ತಿಳಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ತನ್ನ ಕಾರ್ಯಕಾರಿ ಮಂಡಳಿ ಹಾಗೂ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಿ ತನ್ನ ಮುಂಬರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲು ಪ್ರಸ್ತಾವನೆಯನ್ನು ಸಲ್ಲಿಸಿತ್ತು. ವಿಶ್ವವಿದ್ಯಾಲಯವು ಶಿಫಾರಸ್ಸು ಮಾಡಿದ ಹೆಸರುಗಳಲ್ಲಿ ಸಾಧಕರಾದ ಡಾ.ಎಂ.ಜಿ.ಬಿರಾದಾರ, ಡಾ.ಎಸ್.ಎಲ್.ಭೈರಪ್ಪ, ಡಾ. ಚೆನ್ನವೀರಕಣವಿ, ಸಾಲುಮರದ ತಿಮ್ಮಕ್ಕ, ಕೆ.ಶಿವನ್ ಅವರಿಗೆ ಗೌರವಡಾಕ್ಟರೇಟ್ ನೀಡಲು ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ.