ಕಲಬುರಗಿಯಲ್ಲಿ ನಾಳೆ ಕೋವಿಡ್-19 ಪರೀಕ್ಷಾ ಕೇಂದ್ರ ಆರಂಭ: ಸಿಎಂ ಯಡಿಯೂರಪ್ಪ
Update: 2020-03-20 16:48 IST
ಬೆಂಗಳೂರು, ಮಾ.20: ಕೇಂದ್ರದ ನೆರವಿನಿಂದ ರಾಜ್ಯ ಸರಕಾರ ಕಲಬುರಗಿಯಲ್ಲಿ ಕೋವಿಂಡ್-19 ಪರೀಕ್ಷಾ ಪ್ರಯೋಗಾಲಯವನ್ನು ಮಾ.21ರಿಂದ ಆರಂಭಿಸಲಿದ್ದು, ಶಂಕಿತರನ್ನು ಪತ್ತೆ ಹಚ್ಚಲು ಈ ಮುಂಚೆ ಆಗುತ್ತಿದ್ದ ವಿಳಂಬ ತಪ್ಪಲಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು, ನಾಗರಿಕರೂ ಯಾವುದೆ ಕಾರಣಕ್ಕೂ ಆತಂಕಕ್ಕೊಳಗಾಗಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.