'ಜನತಾ ಕರ್ಪ್ಯೂ'ಗೆ ಕೊಡಗು ಖಾಸಗಿ ಬಸ್ ಮಾಲಕರ ಸಂಘ ಬೆಂಬಲ
Update: 2020-03-20 19:43 IST
ಮಡಿಕೇರಿ, ಮಾ.20: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ರವಿವಾರದ ‘ಜನತಾ ಕರ್ಪ್ಯೂ’ಗೆ ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಅಂದು ಜಿಲ್ಲೆಯಾದ್ಯಂತ ಖಾಸಗಿ ಬಸ್‍ಗಳ ಸಂಚಾರ ಇರುವುದಿಲ್ಲ ಎಂದು ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರು ತಿಳಿಸಿದ್ದಾರೆ.
ಇದರೊಂದಿಗೆ ಅಂದಿನ ಜನತಾ ಕರ್ಪ್ಯೂಗೆ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘವೂ ಬೆಂಬಲ ನೀಡಲಿದೆ ಎಂದು ಸಂಘದ ಅಧ್ಯಕ್ಷ ದಿನೇಶ್ ನಾಯರ್ ಅವರು ಹೇಳಿದ್ದಾರೆ. ಅಂದು ಜಿಲ್ಲೆಯಾದ್ಯಂತ ಹೊಟೇಲ್ ಹಾಗೂ ಬಾರ್ ಗಳು ಕೂಡ ಬಂದ್ ಆಗಲಿವೆ.