ವನ್ಯಜೀವಿ ಮಂಡಳಿ ಸದಸ್ಯತ್ವಕ್ಕೆ ಶಾಸಕಿ ಸೌಮ್ಯಾರೆಡ್ಡಿ ರಾಜೀನಾಮೆ: ಕಾರಣವೇನು ಗೊತ್ತಾ ?

Update: 2020-03-21 17:27 GMT

ಬೆಂಗಳೂರು, ಮಾ.21: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಅನುಮತಿ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕ್ರಮವನ್ನು ಖಂಡಿಸಿ ಶಾಸಕಿ ಸೌಮ್ಯಾರೆಡ್ಡಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಪತ್ರ ಬರೆದಿರುವ ಅವರು, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯಿಂದ ಪರಿಸರಕ್ಕೆ ಸಮಸ್ಯೆಯಾಗಲಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಗೊತ್ತಿದ್ದರೂ ಯೋಜನೆಗೆ ಸಮ್ಮತಿ ಸೂಚಿಸಿರುವುದು ಸರಿಯಲ್ಲವೆಂದು ಅಭಿಪ್ರಾಯ ಪಟ್ಟಿದ್ದಾರೆ.

ಸೋಮವಾರ ನಡೆದಿದ್ದ ಸಭೆಯಲ್ಲಿ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯನ್ನು ಕೈಬಿಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದರು. ಆದರೂ, ರಾಜಕೀಯ ಒತ್ತಡಗಳಿಗೆ ಮಣಿದಿರುವ ಅವರು, ಮತ್ತೆ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಿರುವುದು ಖಂಡನೀಯ. ರಾಜ್ಯ ವನ್ಯಜೀವಿ ಮಂಡಳಿ ಅಸ್ತಿತ್ವದಲ್ಲಿದ್ದರೂ ಏನು ಪ್ರಯೋಜನಲ್ಲದಂತಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. ಈ ಯೋಜನೆ ಜಾರಿಗೆ ಬಂದರೆ ಮರಗಳ ಮಾರಣ ಹೋಮವಾಗುತ್ತದೆ. ವನ್ಯಜೀವಿಗಳು ಬದುಕು ಸರ್ವನಾಶವಾಗುತ್ತದೆ. ಮುಂದೆ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳಿಗೆ ಸರಕಾರವೇ ಹೊಣೆ ಎಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News