×
Ad

ಜನತಾ ಕರ್ಫ್ಯೂ: ಕಲಬುರಗಿಯಲ್ಲಿ ಉತ್ತಮ ಸ್ಪಂದನ

Update: 2020-03-22 11:35 IST

ಕಲಬುರಗಿ, ಮಾ.22: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಬಹುತೇಕ ಪ್ರಮುಖ ಜನನಿಬಿಡ ಪ್ರದೇಶಗಳ ಬೆಳಿಗ್ಗೆಯಿಂದಲ್ಲೆ ಖಾಲಿ ಖಾಲಿಯಾಗಿ ಕಂಡು ಬಂತು.

ಜಿಲ್ಲೆಯ ಹೃದಯ ಭಾಗವಾಗಿರುವ ತಿಮ್ಮಾಪುರೆ ಚೌಕ್ ನಲ್ಲಿ  ಪ್ರತಿ ದಿನ ನೂರಾರು ಲೀಟರ್ ಹಾಲು ಮಾರಾಟವಾಗುವ ಪ್ರದೇಶ ಎರಡು ಮೂರು ಕಡೆ ಸಿಗುತ್ತಿದ್ದ ದಿನಪತ್ರಿಕೆಗಳು ಒಂದೇ ಕಡೆ ಮಾತ್ರ ಲಭಿಸುತ್ತಿದೆ. ಪ್ರಧಾನಿ ಅವರ ಕರೆಗೆ ಉರ್ದು, ಮರಾಠಿ ಮತ್ತು ಇಂಗ್ಲಿಷ್ ಪತ್ರಿಕೆಗಳು ಹೊರತುಪಡಿಸಿ, ಪತ್ರಿಕೆ ಮಾರಾಟ ಮಾಡುವ ಜಾಗಗಳು ಖಾಲಿಖಾಲಿಯಾಗಿ ಕಂಡಿತ್ತು.

ಅಲ್ಲದೆ ಖ್ವಾಜಾ ಬಂದೇ ನವಾಝ್ ದರ್ಗಾದ ರೋಝಾ ಮಾರ್ಕೆಟ್, ಅಳಂದ ಚಕ್ ಪೂಸ್ಟ್ ಹಾಗೂ ಖರ್ಗೆ ಪೆಟ್ರೋಲ್ ಬಂಕ್ ಹತ್ತಿರದ ತರಕಾರಿ ಮಾರ್ಕೆಟ್ ಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. 

ಪ್ರಯಾಣಿಕರನ್ನು ಕರೆದೊಯ್ಯಲು ಆಟೊ ಚಾಲಕರ ಮಧ್ಯೆ ಇರುತ್ತಿದ್ದ ಪೈಪೋಟಿ, ಇಂದು ಜೇವರ್ಗಿ ಕ್ರಾಸ್, ದರ್ಗಾ ಪ್ರದೇಶ ರಿಂಗ್ ರೋಡ್ ಮತ್ತು ರೈಲ್ವೆ ಹಾಗೂ ಬಸ್ ನಿಲ್ದಾಣದಿಂದ ಎಲ್ಲಿಯೂ ಕಾಣಿಸಲಿಲ್ಲ.

ತಳ್ಳುಗಾಡಿಗಳಲ್ಲಿ ಚಹಾ ಸಿದ್ಧಪಡಿಸುವವರು, ಪ್ಲಾಸ್ಕ್ ನಲ್ಲಿ ಚಹಾ ತಂದು ಮಾರುವವರೂ ಸಹ ಸಂಪೂರ್ಣ ನಾಪತ್ತೆಯಾಗಿರುವುದಲ್ಲದೇ, ಕೆಲ ನಿಮಿಷಗಳವರೆಗೆ ಮಾತ್ರ ತೆರೆದು ಮುಚ್ಚುವ ಚಹಾ ಅಂಗಡಿಗಳು ನಾಪತೆಯಾಗಿದ್ದವು.

ಕಲಬುರಗಿ ನಗರದ ಪ್ರಮುಖ ಜನದಟ್ಟಣೆ ಪ್ರದೇಶಗಳಾದ ತಿಮ್ಮಾಪುರ, ಜೇವರ್ಗಿ ಕ್ರಾಸ್, ರಾಮಮಂದಿರ್, ಗೋವಾ ಹೊಟೇಲ್, ಕೆಬಿಎನ್ ದರ್ಗಾ, ಖರ್ಗೆ ಪೆಟ್ರೋಲ್ ಬಂಕ್, ಸರಕಾರಿ ಆಸ್ಪತ್ರೆ, ಆಳಂದ ಚೆಕ್ ಪೊಸ್ಟ್, ನೆಹರು ಗಂಜ್ ಹಾಗೂ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಜನರು ಬೀದಿಗೆ ಇಳಿಯದೆ ಜನತಾ ಕರ್ಫ್ಯೂ ಕರೆಗೆ ಜನರು ಮನ್ನಣೆ ನೀಡಿದ್ದು ಜಿಲ್ಲೆಯಲ್ಲಿ ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News