ಜನತಾ ಕರ್ಫ್ಯೂ: ಕೋಲಾರ ಸಂಪೂರ್ಣ ಸ್ತಬ್ಧ
Update: 2020-03-22 11:55 IST
ಕೋಲಾರ, ಮಾ.22: ಕೊರೋನ ವೈರಸ್ ಸೋಂಕು ತಡೆಗೆ ಕೇಂದ್ರ ಸರ್ಕಾರದ ಜನತಾ ಕರ್ಫ್ಯೂ ಗೆ ಜಿಲ್ಲೆಯ ಜನತೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಕೋಲಾರ ಜಿಲ್ಲೆಯ ಕೆಜಿಎಫ್, ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು ಹಾಗೂ ಕೋಲಾರ ನಗರದಲ್ಲಿ ಗಲ್ಲಿಗಲ್ಲಿಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.
ಆಸ್ಪತ್ರೆಗಳು, ಹಾಲಿನ ಸರಬರಾಜು ಔಷಧಿ ಅಂಗಡಿಗಳಿಗೆ ವಿನಾಯತಿ ಇದ್ದರೂ ಜನರು ಯಾರು ಸಹ ಸುಳಿಯುತ್ತಿಲ್ಲ. ಒಂದು ದಿನ ಮುಂಚಿತವಾಗಿಯೇ ಜನ ಅಗತ್ಯ ವಸ್ತುಗಳನ್ನು ಖರೀದಿ ಮಾಡಿಟ್ಟುಕೊಂಡ ಹಿನ್ನಲೆಯಲ್ಲಿ ಜನ ತಮ್ಮ ತಮ್ಮ ಮನೆಗಳಲ್ಲೇ ಬಂದಿಯಾಗಿರುವುದು ಗೋಚರವಾಗುತ್ತಿತ್ತು.