ಓ ಮೆಣಸೇ...

Update: 2020-03-22 18:19 GMT

ಹಿಂದೂ ಧರ್ಮಕ್ಕಾಗಿಯೇ ನಾನು ನನ್ನ ಜೀವನವನ್ನು ಮುಡಿಪಾಗಿರಿಸಿದ್ದೇನೆ - ಸಾಧ್ವಿ ಪ್ರಜ್ಞಾಸಿಂಗ್‌ಟಾಗೋರ್, ಸಂಸದೆ
ವಿವೇಕಾನಂದರ ಹಿಂದೂ ಧರ್ಮವನ್ನು ನಾಶಗೊಳಿಸುವುದಕ್ಕಾಗಿ ಬದುಕನ್ನು ಮುಡಿಪಾಗಿಟ್ಟಿರಬೇಕು.

---------------------

ನೆಗಡಿ, ಕೆಮ್ಮು, ಜ್ವರ ಬಂದರೆ ಕಡ್ಡಾಯವಾಗಿ ತಪಾಸಣೆ ಮಾಡಿಕೊಳ್ಳಬೇಕು. ನಿರಾಕರಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು - ಶ್ರೀರಾಮುಲು, ಸಚಿವ

ತಪಾಸಣೆಯ ಶುಲ್ಕದ ಕುರಿತಂತೆಯೂ ಕ್ರಮ ತೆಗೆದುಕೊಂಡಿದ್ದರೆ ಚೆನ್ನಾಗಿತ್ತು.

---------------------

ರಾಜ್ಯ ಸರಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲ - ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ

ಅಸಾಮಾನ್ಯ ಜ್ಞಾನದ ಪರಿಣಾಮದಿಂದ ರಚನೆಯಾಗಿರುವ ಸರಕಾರವಂತೆ.

---------------------

ನಾನು ಅತೃಪ್ತ ಬಿಜೆಪಿಗರ ಸಭೆ ನಡೆಸಿಲ್ಲ , ನಡೆಸುವುದೂ ಇಲ್ಲ - ಪ್ರಹ್ಲಾದ್‌ಜೋಷಿ, ಕೇಂದ್ರ ಸಚಿವ

ನಿಮ್ಮ ಜೊತೆಗೆ ತೃಪ್ತರಾಗಿರುವ ಬಿಜೆಪಿಗರ ಸಭೆ ನಡೆಸಿದ್ದೀರಿ ಎಂದಾಯಿತು.

---------------------
ಬಿಜೆಪಿಯಲ್ಲಿ ಸಿಎಂ ಆಗಲು 75ವರ್ಷ ವಯಸ್ಸಿನವರೆಗೆ ಅವಕಾಶ ಇದೆ. ಹಾಗಾಗಿ ಒಂದಲ್ಲ ಒಂದು ದಿನ ಸಿಎಂ ಆಗಿಯೇ ಆಗುತ್ತೇನೆ- ಉಮೇಶ್ ಕತ್ತಿ, ಶಾಸಕ

ಕೈಯಲ್ಲಿ ಕತ್ತಿ ಹಿಡಿದು ಕಾಯುತ್ತಿರಿ.

---------------------

ಸೂರ್ಯ ಹುಟ್ಟುವುದು, ಮುಳುಗುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಬಿಜೆಪಿ ಸರಕಾರ ಮೂರು ವರ್ಷ ಇರುವುದು ಅಷ್ಟೇ ಸತ್ಯ - ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ
ನಿಮ್ಮ ಪ್ರಕಾರ ಸೂರ್ಯ ಹುಟ್ಟುವುದು, ಮುಳುಗುವುದು ಮೂರು ವರ್ಷ ಮಾತ್ರ ಇರಬೇಕು.

---------------------

ಕೊರೋನ ಸೋಂಕು ತಡೆಗೆ ಪ್ರಕೃತಿ ವಿಕೋಪ ನಿಧಿಯನ್ನು ಬಳಸಿಕೊಳ್ಳಲಾಗುವುದು - ಆರ್.ಅಶೋಕ್, ಸಚಿವ
ಪ್ರಕೃತಿ ವಿಕೋಪಗಳಿಗೆ ಇನ್ನೂ ಪರಿಹಾರ ನೀಡಿಯೇ ಇಲ್ಲವಲ್ಲ?

---------------------

ದೇಶದ ಯಾವುದೇ ಕಾನೂನನ್ನು ವಿರೋಧಿಸುವ ಮತ್ತು ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ 

ಆದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಕ್ಕುಗಳಿಗೆ ವಿನಾಯಿತಿ ಇದೆ.

---------------------

ಸಂಸತ್‌ನಲ್ಲಿ ಸ್ವತಂತ್ರವಾಗಿ ಧ್ವನಿ ಎತ್ತುವ ಶಕ್ತಿಯನ್ನು ದೇವರು ನನಗೆ ನೀಡಲಿ - ರಂಜನ್ ಗೊಗೊಯಿ, ಭಾರತದ ಮಾಜಿ ಸಿಜೆಐ

ನ್ಯಾಯಾಧೀಶರಾಗಿ ಸ್ವತಂತ್ರವಾಗಿ ಧ್ವನಿಯೆತ್ತಲಾಗದೇ ಇದ್ದುದಕ್ಕೆ ದೇವರು ಕಾರಣ ಎಂಬ ಸ್ಪಷ್ಟೀಕರಣವಿರಬೇಕು.

---------------------

ಡಿಕೆಶಿ, ಸಿದ್ದು ಒಂದಾದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ - ಕೆ.ಬಿ.ಕೋಳಿವಾಡ, ಮಾಜಿ ಸ್ಪೀಕರ್
ಉಳಿದ ಶಾಸಕರು ಬಿಜೆಪಿಗೆ ಮಾರಾಟವಾದರೆ?
---------------------

ಪ್ರಾದೇಶಿಕ ಪಕ್ಷಗಳು ಉಳಿಯಬೇಕಾದರೆ ಕುಟುಂಬ ರಾಜಕಾರಣ ಅನಿವಾರ್ಯ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಕುಟುಂಬ ರಾಜಕಾರಣ ಉಳಿಸುವುದಕ್ಕಾಗಿ ಪ್ರಾದೇಶಿಕ ಪಕ್ಷಗಳು ಅನಿವಾರ್ಯ.

---------------------

ಬ್ರಾಹ್ಮಣರು ಯಾರ ಶತ್ರುಗಳಲ್ಲ - ಆರ್.ವಿ.ದೇಶಪಾಂಡೆ, ಕಾಂಗ್ರೆಸ್ ಮುಖಂಡ

ಅವರು ಸಮಯಕ್ಕೆ ತಕ್ಕ ಹಾಗೆ ಶತ್ರು, ಮಿತ್ರರನ್ನು ಆರಿಸಿಕೊಳ್ಳುತ್ತಾರೆ.

---------------------

ಹಲ್ಲಿಲ್ಲದ ಹಾವಿನಂತೆ ದುರ್ಬಲವಾಗಿರುವ ಕರ್ನಾಟಕ ಲೋಕಾಯುಕ್ತವನ್ನು ಬಲಪಡಿಸಲು ಸಮಗ್ರ ಕಾಯ್ದೆ ತಿದ್ದುಪಡಿ ಅಗತ್ಯ - ಕೆ.ಆರ್.ರಮೇಶ್‌ಕುಮಾರ್, ಮಾಜಿ ಸ್ಪೀಕರ್
ರಬ್ಬರ್ ಹಾವಿಗೆ ಹಲ್ಲು ಜೋಡಿಸಿದರೆ ಪ್ರಯೋಜನವಿದೆಯೇ?

---------------------

2021ರ ತಮಿಳುನಾಡು ವಿಧಾನ ಸಭೆ ಚುನಾವಣೆಯಲ್ಲಿ ರಾಜಕೀಯ ಸುನಾಮಿ ಉಂಟಾಗಲಿದೆ - ರಜನಿಕಾಂತ್, ನಟ

ಆ ಸುನಾಮಿಯಲ್ಲಿ ನಿಮ್ಮ ವಿಗ್ ಹಾರಿ ಹೋಗದಂತೆ ಕಾಪಾಡಿಕೊಳ್ಳಿ.

---------------------

ಹಾದಿ ಬೀದಿಗಳಲ್ಲಿ ನಿಂತು ಮಾತನಾಡಿದರೆ ಸಂವಿಧಾನ ಬದಲಾವಣೆ ಮಾಡಲು ಆಗುವುದಿಲ್ಲ - ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಸಂವಿಧಾನ ಬದಲಾಯಿಸುವವರು ಇದೀಗ ಸಂಸತ್ತಿನಲ್ಲೇ ಮಾತನಾಡುತ್ತಿದ್ದಾರೆ.

---------------------

ಜಗತ್ತನ್ನೇ ಸ್ತಬ್ಧಗೊಳಿಸಿರುವ ಕೊರೋನ ವೈರಸ್ ಚೀನಾದ ವೈರಸ್ ಆಗಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಚೀನಾದ ಉತ್ಪನ್ನಗಳ ವ್ಯಾಲಿಡಿಟಿ ತೀರಾ ಕಡಿಮೆ ಎನ್ನುವ ಕಾರಣಕ್ಕೇ ಜಗತ್ತು ಇನ್ನೂ ಒಂದಿಷ್ಟು ಆಸೆ ಉಳಿಸಿಕೊಂಡಿದೆ.

---------------------

ಕೇಂದ್ರ ಸರಕಾರ ಮಾಡಿದ್ದು( ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ) ಸದುದ್ದೇಶದ ಅನ್ಯಾಯ - ಸಿ.ಟಿ.ರವಿ, ಸಚಿವ

ಮೋದಿಯವರು ಅನ್ಯಾಯ ಮಾಡಿದರೂ ಅದರಲ್ಲಿ ಸದುದ್ದೇಶ ಇರುತ್ತದೆ ಎಂದಾಯಿತು.

---------------------

ಕೊರೋನ ವಿರುದ್ಧದ ಹೋರಾಟ ‘ಟೆಸ್ಟ್’ ಕ್ರಿಕೆಟ್ ಇದ್ದಂತೆ - ಸಚಿನ್ ತೆಂಡುಲ್ಕರ್, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ

ಸದ್ಯಕ್ಕೆ ಕ್ರಿಕೆಟ್ ತಾರೆಯರೂ ಕೊರೋನ ಟೆಸ್ಟ್ ಮಾಡಿಸಬೇಕಾಗಿದೆ.

---------------------

ಕಾಂಗ್ರೆಸ್‌ನಲ್ಲಿ ಯಾರೂ ಹೆಚ್ಚಲ್ಲ , ಯಾರೂ ಕಡಿಮೆ ಅಲ್ಲ, ಎಲ್ಲರೂ ಸಮಾನರು - ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷ

ಅಧಿಕಾರ ಹಂಚುವಾಗ ಮಾತ್ರ ಕೆಲವು ಹೆಚ್ಚು ಸಮಾನರು.

---------------------

ಕಾಂಗ್ರೆಸ್ ಸರಕಾರ (ಮಧ್ಯಪ್ರದೇಶ) ಪತನವಾಗಿರುವುದಕ್ಕೆ ಅದರ ಆಂತರಿಕ ಕಚ್ಚಾಟವೇ ಕಾರಣ - ಶಿವರಾಜ್‌ಸಿಂಗ್ ಚೌಹಾಣ್, ಮ.ಪ್ರ. ಮಾಜಿ ಮುಖ್ಯಮಂತ್ರಿ ಕೊರೋನ ಕಾರಣ ಎನ್ನಲಿಲ್ಲವಲ್ಲ, ಸದ್ಯಕ್ಕೆ.

---------------------

ಮಹಿಳೆಯ ಗೌರವವನ್ನು ಖಾತರಿಪಡಿಸಿಕೊಳ್ಳುವುದು ಅತ್ಯಂತ ಮಹತ್ವದ ಕೆಲಸ - ನರೇಂದ್ರಮೋದಿ, ಪ್ರಧಾನಿ

ಪತಿಯಿಂದ ಪರಿತ್ಯಜಿಸಲ್ಪಟ್ಟ ಮಹಿಳೆಯೊಬ್ಬರು ಗುಜರಾತ್‌ನಲ್ಲಿ ಆ ಗೌರವದ ಖಾತರಿಯಲ್ಲಿದ್ದಾರೆ.

---------------------

ಯೋಗ, ಧ್ಯಾನದಿಂದ ನಾನು ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಇದ್ದೇನೆ - ವಿದ್ಯಾಬಾಲನ್, ನಟಿ
ಗೋಮೂತ್ರವನ್ನು ಯಾಕೆ ಕೈ ಬಿಟ್ಟಿರಿ?

---------------------

ಸದ್ಯದ ಸ್ಥಿತಿಯಲ್ಲಿ ಯಾರೂ ಕೋಳಿ, ಕುರಿ, ಮೀನು, ಮೊಟ್ಟೆ ಸೇರಿದಂತೆ ಮಾಂಸಾಹಾರ ಸಂಪೂರ್ಣ ತ್ಯಜಿಸಬೇಕು - ಕೆ.ಎಸ್. ಈಶ್ವರಪ್ಪ, ಸಚಿವ

ಗೋಮೂತ್ರ ಕುಡಿದು, ಸೆಗಣಿ ತಿಂದು ಬದುಕಬೇಕೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...