ಕೊರೋನ ಭೀತಿ: ಮಾ.31ರವರೆಗೆ ರಾಜ್ಯದ ಎಲ್ಲ ಕಾರ್ಖಾನೆಗಳು, ಗಾರ್ಮೆಂಟ್ಸ್ ಗಳು ಬಂದ್

Update: 2020-03-23 11:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.23: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಾರ್ಖಾನೆಗಳನ್ನು ಮಾ.31ರ ವರೆಗೆ ಬಂದ್ ಮಾಡುವಂತೆ ಎಫ್‌ಕೆಸಿಸಿಐ ಅಧ್ಯಕ್ಷ ಜನಾರ್ದನ್ ತಿಳಿಸಿದ್ದಾರೆ.

ಸೋಮವಾರ ಎಫ್‌ಕೆಸಿಸಿಐನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.31ರವರೆಗೆ ರಾಜ್ಯದ ಎಲ್ಲ ಕಾರ್ಖಾನೆಗಳನ್ನು ಬಂದ್ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಲ್ಲದೇ, ರಾಜ್ಯದ ಎಲ್ಲ ಗಾರ್ಮೆಂಟ್ಸ್‌ಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಕಾರ್ಖಾನೆ, ಗಾರ್ಮೆಂಟ್ಸ್‌ನಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಬಂದ್ ದಿನಗಳ ವೇತನವನ್ನು ಕಾರ್ಖಾನೆ ಅಥವಾ ಗಾರ್ಮೆಂಟ್ಸ್‌ನ ಮಾಲಕರು ನೀಡಬೇಕು. ಒಂದು ವೇಳೆ ಬಂದ್ ಮಾಡದೇ, ಕಾರ್ಖಾನೆಗಳನ್ನು ನಡೆಸಿದರೆ ಅಂತಹ ಕಾರ್ಖಾನೆ, ಗಾರ್ಮೆಂಟ್ಸ್ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News