ರಾಜ್ಯಾದ್ಯಂತ ಲಾಕ್ ಡೌನ್: ವಿಶೇಷ ಪ್ಯಾಕೇಜ್ ಘೋಷಿಸಲು ಪಾಪ್ಯುಲರ್ ಫ್ರಂಟ್ ಮನವಿ

Update: 2020-03-23 16:36 GMT

ಬೆಂಗಳೂರು, ಮಾ.23: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನ ವೈರಸ್ ನಮ್ಮ ರಾಜ್ಯಕ್ಕೂ ವ್ಯಾಪಿಸಿದ್ದು, ಲಾಕ್ ಡೌನ್ ಗೆ ಪೂರಕವಾಗಿ ವಿಶೇಷ ಪ್ಯಾಕೇಜನ್ನು ಘೋಷಿಸುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. 

ಅದೇ ರೀತಿ ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಸೂಚಿಸಿರುವ ನಿರ್ದೇಶನಗಳನ್ನು ಯಥಾವತ್ತಾಗಿ ಪಾಲಿಸುವಂತೆ ಜನತೆಯಲ್ಲಿ ಕೇಳಿಕೊಂಡಿದ್ದಾರೆ. ಸದ್ಯಕ್ಕೆ ಮುಂಜಾಗೃತಾ ಕ್ರಮಗಳೇ ಕೋವಿಡ್ 19ಗೆ ಔಷಧಿಯಾಗಿದ್ದು, ಮನೆಯೊಳಗೆ ಇರುವುದನ್ನು ಗೃಹಬಂಧನ ಎಂದು ಭಾವಿಸದೆ ಮನೆಮದ್ದು ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಜನತೆಗೆ ಪಾಪ್ಯುಲರ್ ಫ್ರಂಟ್ ತಿಳಿಸುತ್ತಿದೆ.

ಈಗಾಗಲೇ ರಾಜ್ಯಾದ್ಯಂತ ಲಾಕ್ ಡೌನ್ ವಿಧಿಸಲಾಗಿದ್ದು, ತಕ್ಷಣ ರಾಜ್ಯ ಸರಕಾರವು ಜನರ ಮೂಲಭೂತ ಅಗತ್ಯ ವಸ್ತುಗಳ ಪೂರೈಕೆಗೆ ತಳಮಟ್ಟದಿಂದಲೇ ಅಗತ್ಯ ಆಹಾರ ಪೂರೈಕೆಯ ವ್ಯವಸ್ಥೆ ಕಲ್ಪಿಸಬೇಕು. ವೈದ್ಯಕೀಯ ಕ್ಷೇತ್ರದೊಂದಿಗೆ ಸಾಥ್ ನೀಡಲು ಪರಿಣತ ಸ್ವಯಂಸೇವಕರನ್ನು ಆಯಾಯ ವ್ಯಾಪ್ತಿಯಲ್ಲಿ ನಿಯೋಜಿಸಲು ಉತ್ತೇಜಿಸಬೇಕು, ರಾಜ್ಯಾದ್ಯಂತ ಪಾಪ್ಯುಲರ್ ಫ್ರೆಂಟ್ ಕಾರ್ಯಕರ್ತರು ಸ್ವಯಂಸೇವಕರಾಗಿ ತೊಡಗಿಸಿಕೊಳ್ಳಲು ಸಿದ್ದರಿದ್ದು. ಸರಕಾರ ಅಥವಾ ಜಿಲ್ಲಾಡಳಿತ ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೇಳಿಕೊಂಡ ಅವರು, ಅಗತ್ಯಾನುಸಾರ ಪ್ರತ್ಯೇಕ ತಾತ್ಕಾಲಿಕ ಚಿಕಿತ್ಸಾ ಶಿಬಿರಗಳನ್ನು ತೆರೆಯಬೇಕು ಎಂದು ಯಾಸಿರ್ ಹಸನ್ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News