ಮೈಸೂರು: ಅಧಿಕ ಬೆಲೆಗೆ ಮಾಸ್ಕ್ ಮಾಡುತ್ತಿದ್ದ ಮೆಡಿಕಲ್ ಶಾಪ್‍ಗೆ 5,000 ರೂ. ದಂಡ

Update: 2020-03-23 17:40 GMT

ಮೈಸೂರು,ಮಾ.23: ಅಧಿಕ ಬೆಲೆಗೆ ಮಾಸ್ಕ್ ಮತ್ತು ಸ್ಯಾನಿಟರೈಸರ್ ಅನ್ನು ಮಾರಾಟ ಮಾಡುತ್ತಿದ್ದ ಔಷಧಿ ಅಂಗಡಿ ಮೇಲೆ ದಾಳಿ ನಡೆಸಿದ ಕಾನೂನು ಮಾಪನ ಇಲಾಖೆ ಅಧಿಕಾರಿಗಳು 5,000 ರೂ. ದಂಡ ವಿಧಿಸಿದ್ದಾರೆ.

ಎನ್.ಆರ್. ಮೊಹಲ್ಲಾದಲ್ಲಿರುವ ಔಷಧಿ ಅಂಗಡಿಯೊಂದರಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಅನ್ನು 10 ರೂ. ಬದಲಿಗೆ 25 ರೂ. ಗೆ ಮತ್ತು ಸ್ಯಾನಿಟೈಸರ್ ಅನ್ನು 50 ರೂ. ಬದಲಿಗೆ 210 ರೂ. ಗಳಿಗೆ ನಿಗದಿತ ದರಕ್ಕಿಂತ ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಾನೂನು ಮಾಪನಾಶಾಸ್ತ್ರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ.

ಕಾನೂನು ಮಾಪನಶಾಸ್ತ್ರದ ಇಲಾಖೆಯ ಸಹಾಯಕ ನಿಯಂತ್ರಕರಾದ ಕೆ.ಎಮ್. ಮಹಾದೇವಸ್ವಾಮಿ, ಸಿಬ್ಬಂದಿಗಳಾದ ನಿತ್ಯಾನಂದ್, ರಾಜೇಂದ್ರ ಅವರು ಸೋಮವಾರ ಈ ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News