ಮೈಸೂರು: ಲಾಕ್ ಡೌನ್ ಇದ್ದರೂ ಕರ್ತವ್ಯ ನಿರ್ವಹಿಸುತ್ತಿದ್ದ ಐಟಿ ಕಂಪನಿ ಬಂದ್ ಮಾಡಿಸಿದ ಮೇಯರ್

Update: 2020-03-23 17:40 GMT

ಮೈಸೂರು,ಮಾ.23: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಮೈಸೂರಿನಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಸರ್ಕಾರದ ಆದೇಶವನ್ನು ಐಟಿ ಕಂಪನಿಯೊಂದು ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದೆ.

ಕಂಪನಿಯಲ್ಲಿ 800ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು. ಮೈಸೂರು ನಗರಪಾಲಿಕೆ ಆರೋಗ್ಯ ಅಧಿಕಾರಿಗಳು, ಮೇಯರ್, ಉಪಮೇಯರ್ ಕಂಪನಿ ಮೇಲೆ ದಾಳಿ ನಡೆಸಿದರು. ಸಿಬ್ಬಂದಿಗೆ ರಜೆ ನೀಡಲು ಸೂಚನೆ ನೀಡಲಾಗಿದ್ದು, ಕಂಪನಿ ಮುಖ್ಯಸ್ಥರನ್ನು ಪಾಲಿಕೆ ಆರೋಗ್ಯ ಅಧಿಕಾರಿ ಡಾ.ನಾಗರಾಜ್ ತರಾಟೆ ತೆಗೆದುಕೊಂಡರು.

ಈಗಾಗಲೇ ಸರ್ಕಾರದ ಅದೇಶ ಇದೆ. ಮೈಸೂರಿನ ಜನರು ಇದನ್ನು ಪಾಲಿಸಬೇಕು. ಈಗ ಈ ಕಂಪನಿಯ ಕೆಲಸವನ್ನು ಸ್ಥಗಿತಗೊಳಿಸಿದ್ದೇವೆ. ಯಾರಾದರೂ ಇದೇ ರೀತಿ ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಾಧಿಕಾರಿ ಡಾ.ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News