ಚಿಕ್ಕಮಗಳೂರು : ನಕಲಿ‌ ಪೊಲೀಸರ ಬಂಧನ

Update: 2020-03-25 05:09 GMT

ಚಿಕ್ಕಮಗಳೂರು : ಕಳೆದ 15 ದಿನಗಳ ಹಿಂದೆ ಪೊಲೀಸರ ಸೋಗಿನಲ್ಲಿ ನಗರದ ಸಾಗರ್ ಸಮಂತ್ ಎಂಬವರನ್ನು ಅಪಹರಿಸಿ ಚಿನ್ನಾಭರಣ ದೋಚಿದ್ದ ತಂಡವನ್ನು ಪತ್ತೆಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಅಕ್ಕಸಾಲಿಗ ರೂಪೇಶ್ (34) ಎಂಬಾತ ಸಾಗರ್ ಸಮಂತ್ ವಿರುದ್ಧ ವೃತ್ತಿ ವೈಷಮ್ಯ ಹೊಂದಿದ್ದು, ತನ್ನ ಸ್ನೇಹಿತರಾದ ಹಾಸನ ನಿವಾಸಿಗಳಾದ ಕುಮಾರ್ (28) , ಹರೀಶ್ (24) , ಮಂಡ್ಯ ಜಿಲ್ಲೆ ಕೆ ಆರ್ ಪೇಟೆಯ ಕಾರ್ತಿಕ್ (26) , ಕಿಶೋರ್ (27) , ಲೋಕೇಶ್ (27) , ಬಟ್ಲ ಬಾಬು (34) , ಬೆಂಗಳೂರಿನ ನವೀನ ಎಂಬವರೊಂದಿಗೆ ಯೋಜನೆ ರೂಪಿಸಿಕೊಂಡು ಸಾಗರ್ ಸಮಂತ್ ರನ್ನು ಕಾರಿನಲ್ಲಿ ಅಪಹರಿಸಿ ತಾವು ಬಸವನಗುಡಿ ಪೊಲೀಸರೆಂದೂ, ನೀನು ಕಳ್ಳತನದ ಚಿನ್ನ ಖರೀದಿ ಮಾಡಿದ್ದೀಯಾ ಎಂದು ಬೆದರಿಸಿ 90 ಗ್ರಾಂ ಚಿನ್ನವನ್ನು ದೋಚಿ, ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ ಇಳಿಸಿ ಹೋಗಿದ್ದರು ಎಂದು ದೂರಲಾಗಿತ್ತು.

ಆರೋಪಿತರನ್ನು ಬಂಧಿಸಿದ ಪೊಲೀಸರು ಸುಮಾರು 7.80 ಲಕ್ಷ ಮೌಲ್ಯದ 160 ಗ್ರಾಂ ಚಿನ್ನ , 2 ಕೆ.ಜಿ ಬೆಳ್ಳಿ ಹಾಗು ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಹಾಗು ಬೈಕನ್ನು ವಶಪಡಿಸಿಕೊಂಡಿರುತ್ತಾರೆ.

ಎಸ್ಪಿ ಹರೀಶ್ ಪಾಂಡೆ, ಹೆಚ್ಚುವರಿ ಎಸ್ಪಿ ಶೃತಿ, ಡಿಎಸ್ಪಿ ಬಸಪ್ಪ ಅಂಗಡಿ ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್, ನಗರ ಪಿಎಸ್ಐ ತೇಜಸ್ವಿ, ಸಿಬ್ಬಂದಿಗಳಾದ ಈರೇಗೌಡ , ಶಶಿಧರ್, ಮಂಜುನಾಥ್ ಆಚಾರ್, ಲೋಹಿತ್ ಸಿ.ಎಂ. , ಗಿರೀಶ್, ಲೋಹಿತ್ , ಸೋಮಪ್ಪ ಗೌಡ, ಮಹಾಂತೇಶ್ , ಮಧು ಕುಮಾರ್ , ಗುರು ಪ್ರಸಾದ್, ನವೀನ್, ಶ್ರೀಧರ್ ಚಾಲಕ ಇಬ್ರಾಹಿಂ, ಪ್ರಸನ್ನ, ತಿಮ್ಮ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಅಧಿಕಾರಿ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಿರುವ ಎಸ್ಪಿ ಹರೀಶ್ ಪಾಂಡೆ ಬಹುಮಾನ ಘೋಷಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News