×
Ad

ಕಲಬುರಗಿ: ಜಿಲ್ಲಾಡಳಿತ ಆದೇಶ ಪಾಲಿಸದವರಿಗೆ ಬೀದಿ ಕಸಗುಡಿಸುವ ಶಿಕ್ಷೆ ನೀಡಿದ ಪೊಲೀಸರು

Update: 2020-03-26 15:02 IST

ಕಲಬುರಗಿ : ಕೊರೋನ ಭೀತಿ ಹಿನ್ನೆಯಲ್ಲಿ ದೇಶವೇ ಲಾಕ್ ಡೌನ್ ಆಗಿದ್ದು, ಕೋವಿಡ್-19 ತಡೆಗಟ್ಟುಲು ಜಿಲ್ಲಾಡಳಿತ ಕಲಂ 144 ಜಾರಿಗೊಳಿಸಿದೆ. ನಿಯಮ ಉಲ್ಲಂಘಿಸಿ ಬೀದಿಗೆ ಇಳಿದವರಿಗೆ ಚೌಕ್ ಪೊಲೀಸ್ ಠಾಣೆಯ ಪಿ.ಎಸ್.ಐ ಪೊರಕೆ ನೀಡಿ ಬೀದಿಯ ಕಸ ಗುಡಿಸುವಂತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ಜಿಲ್ಲೆಯಲ್ಲಿ ನಿಯಮ ಪಾಲಿಸದವರಿಗೆ ಪೊಲೀಸರು ಲಾಠಿ ರುಚಿ ಮತ್ತು ಬಸ್ಕಿ ಹೊಡಿಸುವ ಶಿಕ್ಷೆ ನೀಡಿದ್ದರು. ಆದರೆ ಮತ್ತೆ ಇಂದು ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಅನಾವಶ್ಯ ಬೀದಿಗೆ ಇಳಿದ ಕೆಲವರಿಗೆ ಪೊಲೀಸರು ಪೊರಕೆ ನೀಡಿ ರಸ್ತೆಯ ಕಸಗುಡಿಸಿ ನಗರ ಕ್ಲೀನ್ ಮಾಡುವಂತೆ ಆಜ್ಞಾಪಿಸಿದ್ದಾರೆ.

ಸುಖಾ ಸುಮ್ಮನೆ ಹೊರಗಡೆ ಒಡಾಡಬೇಡಿ, ಜಿಲ್ಲಾಡಳಿತದ ಆದೇಶ ಪಾಲಿಸಿ ಎಂದು ತಾಕೀತು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News