ಕೊರೋನ ವೈರಸ್: ಕ್ವಾರಂಟೈನ್ ಗಾಗಿ ಹೋಟೆಲನ್ನೇ ಬಿಟ್ಟುಕೊಟ್ಟ ಹುಬ್ಬಳ್ಳಿಯ ಅಶ್ರಫ್ ಅಲಿ

Update: 2020-03-26 17:47 GMT

ಹುಬ್ಬಳ್ಳಿ, ಮಾ.26: ಕೊಪ್ಪೀಕರ್ ರಸ್ತೆಯಲ್ಲಿರುವ ಮೆಟ್ರೋಪೊಲಿಸ್ ಹೊಟೇಲ್‍ನ ಒಂದು ಭಾಗದ 46 ಕೊಠಡಿಗಳು, ಊಟ ಮತ್ತು ಉಪಾಹಾರವನ್ನು ಸ್ವಯಂ ಪ್ರೇರಣೆಯಿಂದ ಒದಗಿಸುವುದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶ್ರಫ್ ಅಲಿ ಬಶೀರ್ ಅಹ್ಮದ್ ಅವರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಪತ್ರ ಹಸ್ತಾಂತರಿಸಿದರು.

'ಹೊಟೇಲಿನ ಕೊಠಡಿಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ಕಳುಹಿಸಬಹುದು. ಮೆಟ್ರೋಪೊಲಿಸ್ ಸಮೂಹವು ಮುಂಬೈ ಅಂತರಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ 70 ಹೊಟೇಲ್ ಕೊಠಡಿಗಳನ್ನು ಅಲ್ಲಿನ ಸರಕಾರಕ್ಕೆ ಕ್ವಾರಂಟೈನ್ ಸೌಲಭ್ಯಕ್ಕಾಗಿ ನೀಡಲಾಗಿದೆ. ಸಂಸ್ಥೆಯ ಸಿಎಸ್‍ಆರ್ ಚಟುವಟಿಕೆಯಡಿ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಶ್ರಫ್ ಅಲಿ ತಿಳಿಸಿದರು.

ಹೊಟೇಲ್ ಉದ್ಯಮಿಗಳು ಸ್ವಯಂಪ್ರೇರಣೆಯಿಂದ ಕ್ವಾರಂಟೈನ್ ಸೌಲಭ್ಯಕ್ಕಾಗಿ ಕೊಠಡಿಗಳನ್ನು ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ದೀಪಾ ಚೋಳನ್ ಪ್ರಶಂಸೆ ವ್ಯಕ್ತಪಡಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News