ಮನೆಯಲ್ಲಿಯೇ ನಮಾಝ್ ನಿರ್ವಹಿಸಲು ಇಮಾರತ್-ಎ-ಶರೀಅ ಮನವಿ

Update: 2020-03-26 17:52 GMT

ಬೆಂಗಳೂರು, ಮಾ.26: ಕೊರೋನ ವೈರಸ್ ತಡೆಗಟ್ಟುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ನಡೆಸುತ್ತಿರುವ ಮುಂಜಾಗ್ರತಾ ಕ್ರಮಕ್ಕೆ ಪೂರಕವಾಗಿ ಮತ್ತು ದೇಶದ, ಸಮಾಜದ ಹಿತದೃಷ್ಟಿಯಿಂದ ದಿನದ ಐದು ಬಾರಿಯ ನಮಾಝ್ ಅಲ್ಲದೆ ಶುಕ್ರವಾರದ ಜುಮಾ ನಮಾಝ್ ಅನ್ನು ಕೂಡ ಮನೆಯಲ್ಲೇ ನಿರ್ವಹಿಸುವಂತೆ ಇಮಾರತ್-ಎ-ಶರೀಅ ಕರ್ನಾಟಕ ತಿಳಿಸಿದೆ.

ಜನ ದಟ್ಟಣೆ ಕಡೆ ರೋಗ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯು ಮಸೀದಿಗಳಲ್ಲೂ ಕೂಡ ಹೆಚ್ಚಿನ ಜನರು ಸೇರದಂತೆ ಸೂಚಿಸಿದೆ. ಸಮಾಜದ ಹಿತದೃಷ್ಟಿಯಿಂದ ಇದನ್ನು ಎಲ್ಲರೂ ಪಾಲಿಸುವ ಅಗತ್ಯವಿದೆ. ಹಾಗಾಗಿ, ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝ್‍ನ ಬದಲು ಎಲ್ಲರೂ ತಮ್ಮ ಮನೆಗಳಲ್ಲೇ ನಮಾಝ್ ನಿರ್ವಹಿಸುವಂತೆ ಪ್ರಕಟನೆಯಲ್ಲಿ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News