ಬೆಳಗಾವಿ ಜಿಲ್ಲೆಯ 10 ಪ್ರಕರಣಗಳ ವರದಿ ನೆಗೆಟಿವ್: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

Update: 2020-03-26 18:04 GMT
ಸಾಂದರ್ಭಿಕ ಚಿತ್ರ

ಬೆಳಗಾವಿ, ಮಾ.26: ಕೋವಿಡ್-19 ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಇದುವರೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ಎಲ್ಲ 10 ವರದಿಗಳೂ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಇದುವರೆಗೆ 10 ಜನರ ಗಂಟಲು ದ್ರವಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗಾಗಲೆ ಐದು ವರದಿಗಳು ನೆಗೆಟಿವ್ ಬಂದಿದ್ದವು, ಹೊಸದಾಗಿ ಕಳುಹಿಸಲಾಗಿದ್ದ ಉಳಿದ ಐದು ಮಾದರಿಗಳ ವರದಿಯೂ ಬುಧವಾರ ಬಂದಿದ್ದು, ಅವುಗಳು ಕೂಡ ನೆಗೆಟಿವ್ ಬಂದಿವೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಪ್ರಯೋಗಾಲಯದಿಂದ ಬುಧವಾರ ಲಭಿಸಿರುವ ವರದಿ ಪ್ರಕಾರ ಹೊಸದಾಗಿ ಕಳುಹಿಸಲಾಗಿರುವ ಎಲ್ಲ ಐದು ಮಾದರಿಗಳ ಫಲಿತಾಂಶ ನೆಗೆಟಿವ್ ಬಂದಿದೆ. ಈ ಮುಂಚೆ ಎರಡು ಮಾದರಿ ಬೆಂಗಳೂರು ಹಾಗೂ ಮೂರು ಮಾದರಿಗಳನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವು ಕೂಡ ನೆಗೆಟಿವ್ ಬಂದಿದ್ದವು. ಇದೀಗ ಜಿಲ್ಲೆಯಿಂದ ಕಳುಹಿಸಲಾದ ಎಲ್ಲ 10 ಮಾದರಿಗಳ ವರದಿ ನೆಗೆಟಿವ್ ಬಂದಿದೆ. ಜನತೆ ಆತಂಕಕ್ಕೆ ಒಳಗಾಗದೆ ಸರಕಾರದ ಸೂಚನೆ ಮೇರೆಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News