ಬೆಳಗ್ಗೆ 6 ರಿಂದ 12ರವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ: ಕೊಡಗು ಜಿಲ್ಲಾಧಿಕಾರಿ

Update: 2020-03-26 18:18 GMT

ಮಡಿಕೇರಿ, ಮಾ.26: ಕೊಡಗು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿರುವ ನಿಷೇಧಾಜ್ಞೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಪಮಟ್ಟಿನ ಸಡಿಲಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 12ಗಂಟೆ ವರೆಗೆ ಹಾಲು, ದಿನಪತ್ರಿಕೆ, ತರಕಾರಿ, ದಿನಸಿ ಸಾಮಾಗ್ರಿ  ಖರೀದಿಸಲು ಸಾರ್ವಜನಿಕರಿಗೆ ಮತ್ತು ಮಾರಾಟ ಮಳಿಗೆ ತೆರೆಯಲು ವಿತರಕರಿಗೆ ಅವಕಾಶವಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಸಮಯವನ್ನು ವಿಸ್ತರಿಸಲಾಗಿದ್ದು, ಸಾರ್ವಜನಿಕರು ಅವಸರ ಪಡದೆ, ಗುಂಪುಗೂಡದೆ, ಕನಿಷ್ಟ 1 ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಂಡು ನಿರ್ಭೀತಿಯಿಂದ ಖರೀದಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News