×
Ad

'ಹಜ್ ನಿಂದ ಬಂದ ವ್ಯಕ್ತಿಗೆ ಕೊರೋನ' ಎಂದು ಸುಳ್ಳು ಸುದ್ದಿ: ಯುವಕನ ವಿರುದ್ಧ ಎಫ್ಐಆರ್

Update: 2020-03-27 18:06 IST
ಸಾಂದರ್ಭಿಕ ಚಿತ್ರ

ಕೊಪ್ಪಳ, ಮಾ.27: ವ್ಯಕ್ತಿಗೆ ಕೊರೋನ ಸೋಂಕು ತಗುಲಿದೆ ಎಂದು ಸುಳ್ಳು ಸುದ್ದಿಯನ್ನು ಕೊಪ್ಪಳ ಜಿಲ್ಲಾಧಿಕಾರಿಗೆ ರವಾನಿಸಿದ ಹಿನ್ನೆಲೆ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಯುವಕನೊಬ್ಬನ ಮೇಲೆ ಎಫ್‍ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ಪಟ್ಟಣದ ಗಂಗಾವತಿ ಬಳಿಯ ಗ್ರಾಮದ ಯುವಕ ಪ್ರಭುರಾಜ್ ಹುಳ್ಳಿ ಎಂಬವರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯು ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಹಜ್ ಯಾತ್ರೆ ಮುಗಿಸಿಕೊಂಡು ಬಂದಿರುವ ವ್ಯಕ್ತಿಯೊಬ್ಬರಿಗೆ ಕೊರೋನ ಸೋಂಕು ತಗುಲಿದ್ದು ಮಸೀದಿಯಲ್ಲಿ ತಂಗಿದ್ದಾರೆ. ಇದರಿಂದ ಸಾಂಕ್ರಾಮಿಕವಾಗಿ ರೋಗ ಹರಡುವ ಭೀತಿ ಎದುರಾಗಿದೆ ಎಂದು ಯುವಕ ಜಿಲ್ಲಾಧಿಕಾರಿಯ ಮೊಬೈಲ್‍ಗೆ ಸಂದೇಶ ರವಾನಿಸಿದ್ದ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ತನಿಖೆ ನಡೆಸಿದಾಗ ಮಾಹಿತಿ ಸುಳ್ಳು ಎಂದು ಗೊತ್ತಾಗಿದೆ. ಈ ಹಿನ್ನೆಲೆ ಗಂಗಾವತಿ ಗ್ರಾಮೀಣ ಠಾಣೆ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News