ನಮ್ಮ ತಪ್ಪಿಗಾಗಿ ನಮ್ಮ ಕುಟುಂಬದವರು ನರಳಬೇಕೆ?: ಕೊರೋನ ಬಗ್ಗೆ ಜಾಗೃತರಾಗಲು ಬಿ.ಶ್ರೀರಾಮುಲು ಮನವಿ

Update: 2020-03-27 12:59 GMT

ಬೆಂಗಳೂರು, ಮಾ.27: ರಾಜ್ಯದಲ್ಲಿ ಇಂದು ಒಬ್ಬ ಕೋವಿಡ್-19(ಕೊರೋನ) ಸೋಂಕಿತ ಮೃತಪಟ್ಟಿದ್ದು, ಮೃತಪಟ್ಟರ ಸಂಖ್ಯೆ 3ಕ್ಕೆ ಏರಿದೆ. ಎಲ್ಲ ನಾಗರಿಕರು ಲಾಕ್‍ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ, ಮನೆಯಲ್ಲಿ ಮುಂಜಾಗ್ರತಾ ಕ್ರಮಗಳೊಂದಿಗೆ ಸುರಕ್ಷಿತವಾಗಿರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ಸೋಂಕು ಪೀಡಿತರಿಂದ, ಸೋಂಕು ಮೊದಲು ತಗಲುವುದು ನಮ್ಮ ಹತ್ತಿದವರಿಗೆ ಹೊರತು ಸಮಾಜ ಅಥವಾ ಪ್ರಪಂಚಕ್ಕಲ್ಲ. ಮನೆಯಿಂದ ಹೊರ ಹೋಗಿ ಬಂದಾಗ ನಮಗೂ ಸೋಂಕು ತಗುಲಬಹುದು. ಆ ಸೋಂಕು ನಮ್ಮಿಂದ ಮನೆಯಲ್ಲಿರುವ ತಂದೆ, ತಾಯಿ, ಮಕ್ಕಳಿಗೆ ತಗುಲುವುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಾವು ಮಾಡುವ ತಪ್ಪಿನಿಂದಾಗಿ ನಮ್ಮ ಕುಟುಂಬದವರು ಕೋವಿಡ್-19 ಸೋಂಕಿನಿಂದ ನರಳಬೇಕೆ? ಯೋಚಿಸಿ. ಮನೆಯಲ್ಲೆ ಸುರಕ್ಷಿತವಾಗಿರಿ, ಮನೆಯಲ್ಲಿರುವಾಗ ವೈಯಕ್ತಿಕ ಸ್ವಚ್ಛತೆ ಕಾಯ್ದುಕೊಳ್ಳಿ ಎಂದು ಶ್ರೀರಾಮುಲು ಕೋರಿದ್ದಾರೆ.

ನಿಖರ ಮಾಹಿತಿಗೆ ಸರಕಾರಿ ಆ್ಯಪ್

ನಾಗರಿಕರು ಗಾಳಿ ಸುದ್ದಿಗಳಿಗೆ ಕಿವಿಗೊಡದೆ, ಕೊರೋನ ಕುರಿತಾದ ನಿಖರ ಮಾಹಿತಿ ನೀಡುವ ಕರ್ನಾಟಕ ಸರಕಾರದ ಆ್ಯಪ್ ಅನ್ನು ತಮ್ಮ ಮೊಬೈಲ್‍ಗೆ ಡೌನ್‍ಲೋಡ್ ಮಾಡಿಕೊಳ್ಳಿ. ಇದು ಕೊರೋನ ಪೀಡಿತ ರೋಗಿಗಳ ಸ್ಥಳಗಳು ಮತ್ತು ಅವರ 14 ದಿನಗಳ ಚಲನವಲನದ ಇತಿಹಾಸವನ್ನು ತೋರಿಸುತ್ತದೆ. ಅಲ್ಲದೆ, ಮಾದರಿ ಸಂಗ್ರಹ ಕೇಂದ್ರಗಳು ಮತ್ತು ಪರೀಕ್ಷಾ ಪ್ರಯೋಗಾಲಯಗಳು ಸೇರಿದಂತೆ ಕೊರೋನ ವೈರಸ್‍ಗೆ ಚಿಕಿತ್ಸೆ ನೀಡಬಹುದಾದ ಹತ್ತಿರದ ಆಸ್ಪತ್ರೆಗಳನ್ನು ಗುರುತಿಸಲು ನಾಗರಿಕರಿಗೆ ಅನುಕೂಲವಾಗುತ್ತದೆ.

-ಶ್ರೀರಾಮುಲು, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News