ಅನಾವಶ್ಯಕವಾಗಿ ಲಾಠಿ ಬಳಸಬೇಡಿ, ಅನುಚಿತವಾಗಿ ವರ್ತಿಸಬೇಡಿ: ಪೊಲೀಸರಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ
Update: 2020-03-27 20:09 IST
ಬೆಂಗಳೂರು, ಮಾ.27: ಸಾರ್ವಜನಿಕರ ಬಳಿ ಸಿಬ್ಬಂದಿ ವಿನಾಕಾರಣ ಅನುಚಿತವಾಗಿ ವರ್ತಿಸದೆ ಒಗ್ಗಟ್ಟಾಗಿ ಕೊರೋನ ತಡೆಗಟ್ಟಲು ಮುಂದಾಗಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಶುಕ್ರವಾರ ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕೊರೋನ ಹಾಗೂ ಕಾನೂನು ಸುವ್ಯವಸ್ಥೆ ನಿರ್ವಹಣೆ ಬಗ್ಗೆ ಮಹತ್ವದ ಸಭೆ ನಡೆಸಲಾಯಿತು.
ಸಾರ್ವಜನಿಕರ ಬಳಿ ವಿನಾಕಾರಣ ಅನುಚಿತವಾಗಿ ಸಿಬ್ಬಂದಿ ವರ್ತಿಸದೇ ಒಗ್ಗಟ್ಟಾಗಿ ಕೊರೋನ ತಡೆಗಟ್ಟಲು ಮುಂದಾಗಬೇಕು. ಜೊತೆಗೆ ಇನ್ನೂ 19 ದಿನಗಳ ಕಾಲ ನೂತನ ನಿಯಮ ಹಾಗೂ ನಗರದ ಕಾನೂನು ಹಾಗೂ ಸುವ್ಯವಸ್ಥೆಯನ್ನು ಸಂಚಾರಿ ಪೊಲೀಸರು ಪಾಲಿಸಬೇಕು. ಜೊತೆಗೆ ಲಾಠಿಯನ್ನು ಅನಾವಶ್ಯಕವಾಗಿ ಬಳಸದಂತೆ ಪ್ರವೀಣ್ ಸೂದ್ ಸೂಚನೆ ನೀಡಿದರು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.