ಕೋವಿಡ್-19 ವೈರಸ್ ಚಿತ್ರ ಸೆರೆಹಿಡಿದ ಭಾರತೀಯ ವಿಜ್ಞಾನಿಗಳು

Update: 2020-03-28 06:02 GMT

ಪುಣೆ, ಮಾ.28: ಇಡೀ ಜಗತ್ತನ್ನೇ ಅಲುಗಾಡಿಸಿ ಬಿಟ್ಟಿರುವ ಕೊರೋನ ವೈರಸ್ ನೋಡಲು ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಭಾರತದಲ್ಲಿ ಕೊರೋನ ವೈರಸ್‌ನ ಮೊದಲ ದೃಢಪಟ್ಟ ಪ್ರಕರಣದಲ್ಲಿನ ರೋಗಿಯ ಗಂಟು ದ್ರವ ಮಾದರಿಯನ್ನು ಬಳಸಿ ಈ ಕೋವಿಡ್-19 ಚಿತ್ರವನ್ನು ಪುಣೆಯ ಐಸಿಎಂಆರ್-ಎನ್‌ಐವಿಯ ವಿಜ್ಞಾನಿಗಳು ತೆಗೆದಿದ್ದಾರೆ.

ಟ್ರಾನ್ಸ್‌ಮಿಶನ್ ಇಲೆಕ್ಟ್ರಾನ್ ಮೈಕ್ರೋಸ್ಕೋಪ್ ಮೂಲಕ ಈ ಕೊರೋನ ವೈಸರ್ ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಅವುಗಳನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ಪ್ರಕಟಿಸಲಾಗಿದೆ. ಚೀನಾದ ವುಹಾನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಮೂವರು ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿನಿಯ ಗಂಟಲು ದ್ರವ ಮಾದರಿಯಿಂದ ಈ ಚಿತ್ರ ಸೆರೆಹಿಡಿಯಲಾಗಿದೆ.

ಈ ವೈರಸ್ ವುಹಾನ್ ನಲ್ಲಿ ಕಂಡುಬಂದ ವೈರಸ್‌ಗೆ ಶೇ.99.98ರಷ್ಟು ಹೋಲಿಕೆಯಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವೃತ್ತಾಕಾರದ ಕೊರೋನ ವೈರಸ್ ಪಾರ್ಟಿಕಲ್‌ನಿಂದ ಹೊರಚಾಚಿದ ಕಾಂಡದಂತಹ ವಸ್ತುಗಳು ಈ ಚಿತ್ರದಲ್ಲಿ ಕಾಣಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News