ಗುಳೆ ಹೋಗುತ್ತಿರುವ ಕಾರ್ಮಿಕರು

Update: 2020-03-28 17:23 GMT

ಕೊರೋನ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಸರಕಾರ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡಿರುವ ಕಾರ್ಮಿಕರು ದಿಲ್ಲಿ ಸೇರಿದಂತೆ ದೇಶದ ವಿವಿಧ ನಗರಗಳಿಂದ ಹಸಿದ ಹೊಟ್ಟೆಯಲ್ಲೇ ತಮ್ಮ ಊರುಗಳಿಗೆ ವಾಪಸಾಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ವಲಸಿಗ ಕಾರ್ಮಿಕರ ಸಮಸ್ಯೆಯು ಇನ್ನೊಂದು ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆಯಿದೆ. ದಿಲ್ಲಿಯಿಂದ ಸಾವಿರಾರು ವಲಸಿಗರು ಉತ್ತರಪ್ರದೇಶ, ಬಿಹಾರಗಳಲ್ಲಿರುವ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದಾರೆ. ಇನ್ನು ಕೆಲವರು ಉತ್ತರಪ್ರದೇಶದ ಗಾಝಿಯಾಬಾದ್‌ನಿಂದ ಸರಕಾರಿ ಹಾಗೂ ಖಾಸಗಿ ಬಸ್‌ಗಳನ್ನೇರಿ, ತಮ್ಮ ಹಳ್ಳಿಗಳನ್ನು ಸೇರುತ್ತಿದ್ದಾರೆ.ಲಾಕ್‌ಡೌನ್ ವೇಳೆ ಖಾಸಗಿ ಬಸ್‌ಗಳ ಒಡಾಟವನ್ನು ನಿಷೇಧಿಸಲಾಗಿದ್ದರೂ, ಅವು ಪ್ರಯಾಣಿಕರನ್ನು ಕೊಂಡೊಯ್ಯಲು ಅಧಿಕ ಹಣವನ್ನು ವಸೂಲು ಮಾಡುತ್ತಿವೆಯೆಂದು ಈ ಬಡಕಾರ್ಮಿಕರು ತಮ್ಮ ಗೋಳು ತೋಡಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor