×
Ad

ಅಲ್ಲಿಗೆ ಹೋಗಬೇಡ, ಇಲ್ಲಿಗೆ ಹೋಗಬೇಡ ಎಂದು ಯಾರೂ ನನಗೆ ಹೇಳುವಂತಿಲ್ಲ: ರೇಣುಕಾಚಾರ್ಯ

Update: 2020-03-29 19:45 IST

ದಾವಣಗೆರೆ, ಮಾ.29: ನಾನೊಬ್ಬ ಜನಪ್ರತಿನಿಧಿ. ನನ್ನನ್ನು ಅಲ್ಲಿಗೆ ಹೋಗಬೇಡ, ಇಲ್ಲಿಗೆ ಹೋಗಬೇಡ ಎಂದು ಯಾರೂ ನನ್ನನ್ನು ಕೇಳುವಂತಿಲ್ಲ. ನನ್ನನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

ರವಿವಾರ ಕೊರೋನ ವೈರಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ದಾವಣಗೆರೆಯಲ್ಲಿ ಓಡಾಡುತ್ತಿದ್ದ ರೇಣುಕಾಚಾರ್ಯರನ್ನು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಯಾರೂ ಹೊರಬರಬೇಡಿ ಎಂದು ಹೇಳಿಲ್ಲವಾ, ಯಾಕೆ ಹೊರಗಡೆ ಬಂದಿದೀರಾ. ಹೊನ್ನಾಳಿ ಬಿಟ್ಟು ಯಾಕೆ ಬಂದ್ರಿ ಎಂದು ಪ್ರಶ್ನಿಸಿದ್ದರು. ಅದಕ್ಕೆ ರೇಣುಕಾಚಾರ್ಯ ಮಹಾಂತೇಶ್‍ ರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಸಂಸದರ ಮನೆಗೆ ನಾನು ಮತ್ತು ಮೇಯರ್ ಹೋಗಿದ್ದೆವು. 10 ಅಡಿ ದೂರ ನಿಂತು ಮಾತನಾಡಿಕೊಂಡು, ಆರೋಗ್ಯ ವಿಚಾರಿಸಿಕೊಂಡು ಬಂದೆವು. ಅದರಲ್ಲಿ ತಪ್ಪೇನಿದೆ ಎಂದು ಹೇಳಿದರು.

ಅದಕ್ಕೆ ಮೇಯರ್ ಬಿ.ಜಿ.ಅಜಯ್‍ಕುಮಾರ್ ರೇಣುಕಾಚಾರ್ಯ ಸಿಎಂ ಅವರ ರಾಜಕೀಯ ಕಾರ್ಯದರ್ಶೀ. ಅವರು ರಾಜ್ಯದ ಎಲ್ಲ ಕಡೆ ಹೋಗಬಹುದು ಎಂದು ಸಮರ್ಥಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News