×
Ad

ಇಂದು 7 ಹೊಸ ಸೋಂಕಿತರು: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆ

Update: 2020-03-29 20:34 IST

ಬೆಂಗಳೂರು, ಮಾ.29: ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಮತ್ತಷ್ಟು ಅಧಿಕವಾಗುತ್ತಿದ್ದು ಕಳೆದೆರಡು ದಿನಗಳಿಂದ ಸತತವಾಗಿ ಎರಡಂಕಿಗೆ ಏರಿಕೆಯಾಗಿದ್ದ ಸೋಂಕಿತರ ಸಂಖ್ಯೆ ರವಿವಾರ ಒಂದಂಕಿಗೆ ಇಳಿದಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದ್ದು, ಇಂದು 7 ಹೊಸ ಪ್ರಕರಣಗಳು ದೃಢಪಟ್ಟಿವೆ.

ಉಡುಪಿ ಮೂಲದ ಇಬ್ಬರಲ್ಲಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಐದು ಹೊಸ ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸೋಂಕಿತರ ವಿವರ
ರೋಗಿ 77: ನಂಜನಗೂಡಿನ 39 ವರ್ಷದ ವ್ಯಕ್ತಿ. ಮೈಸೂರು ಜಿಲ್ಲೆಯವರಾದ ಇವರು ಔಷಧಿ ತಯಾರಿಕಾ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ರೋಗಿ 78: ಮೈಸೂರು ಜಿಲ್ಲೆಯ ನಿವಾಸಿಯಾದ 38 ವರ್ಷದ ಪುರುಷರೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಈ ಹಿಂದೆ ಸೋಂಕು ದೃಢಪಟ್ಟಿದ್ದವರ ಸಂಪರ್ಕದಲ್ಲಿದ್ದರು. ಇವರೂ ಔಷಧಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ರೋಗಿ 79: ನಂಜನಗೂಡಿ 21 ವರ್ಷದ ಯುವಕರಾಗಿದ್ದಾರೆ. ಈತನೂ ಔಷಧಿ ಕಂಪೆನಿಯಲ್ಲಿ ದುಡಿಯುತ್ತಿದ್ದರು.
ರೋಗಿ 80: ನಂಜನಗೂಡಿನ 31 ವರ್ಷದ ವ್ಯಕ್ತಿಯಾಗಿದ್ದು, ಔಷಧಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ರೋಗಿ 81: ನಂಜನಗೂಡಿನ 42 ವರ್ಷದ ವ್ಯಕ್ತಿಯಾಗಿದ್ದು, ಇವರು ಔಷಧ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಮೇಲಿನ ಇವರೆಲ್ಲರನ್ನೂ ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ, ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ರೋಗಿ 82: ಉಡುಪಿ ಜಿಲ್ಲೆಯ ನಿವಾಸಿಯಾದ 3 ವರ್ಷದ ಪುರುಷರೊಬ್ಬರು, ಮಾ.17 ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದರು. 
ರೋಗಿ 83: ಉಡುಪಿ ಜಿಲ್ಲೆಯ ನಿವಾಸಿಯಾದ 29 ವರ್ಷದ ಪುರುಷರಾಗಿದ್ದು, ಇವರು ಕೇರಳಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆಯುಳ್ಳವರಾಗಿದ್ದಾರೆ. ಇವರಿಬ್ಬರನ್ನೂ ಉಡುಪಿ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರಾಜ್ಯದಲ್ಲಿ ಜಿಲ್ಲಾವಾರು ಪಟ್ಟಿ:

ಬೆಂಗಳೂರು    : 41
ಚಿಕ್ಕಬಳ್ಳಾಪುರ : 8
ಮೈಸೂರು      : 8
ದಕ್ಷಿಣಕನ್ನಡ    : 7
ಉತ್ತರಕನ್ನಡ   : 7
ಕಲಬುರಗಿ      : 3
ಕೊಡಗು        : 1
ಉಡುಪಿ        : 3
ದಾವಣಗೆರೆ : 3
ಧಾರವಾಡ : 1
ತುಮಕೂರು : 1

ಬೆಂಗಳೂರು ನಗರ ಜಿಲ್ಲೆಯಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ 31 'ಫೀವರ್ ಕ್ಲಿನಿಕ್‍'ಗಳನ್ನು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಾರಂಭಿಸಲಾಗುತ್ತದೆ. ಹೆಚ್ಚಿನ ಅಪಾಯವುಳ್ಳ ಪ್ರಥಮ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಕ್ವಾರಂಟೈನ್‍ನಲ್ಲಿಡಲು ಬಿಬಿಎಂಪಿ ವ್ಯಾಪ್ತಿಯಲ್ಲಿ 11 ಹೊಟೇಲ್‍ಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ಸಂಪರ್ಕವಿರುವ ವ್ಯಕ್ತಿಗಳ ಕ್ವಾರಂಟೈನ್ ಸೌಲಭ್ಯವಿರುವ ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲು ಆದೇಶಿಸಲಾಗಿದೆ.

ರಾಜ್ಯದಲ್ಲಿ ಇದುವರೆಗೂ 120 ಜನರನ್ನು ಮನೆ ಕ್ವಾರಂಟೈನ್ ನಿಂದ ನಿಗದಿತ ಸಂಸ್ಥೆಗಳಲ್ಲಿ ಕ್ವಾರನ್‍ಟೈನ್ ವರ್ಗಾವಣೆ ಮಾಡಲಾಗಿದೆ. ಇದುವರೆಗೂ 12, 658 ಮಂದಿಗೆ ಕೊರೋನ ಸಂಬಂಧ ಕೌನ್ಸೆಲಿಂಗ್ ನಡೆದಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News