ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಸೂಪರ್ ಮಾರ್ಕೆಟ್ ಗೆ ಪ್ರವೇಶ ನಿರಾಕರಣೆ

Update: 2020-03-29 16:12 GMT
Photo: Twitter

ಮೈಸೂರು: ನಗರದ ಸೂಪರ್ ಮಾರ್ಕೆಟ್ ನಲ್ಲಿ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ಒಳಪ್ರವೇಶಿಸಲು ಅವಕಾಶ ನೀಡದೆ ಅವರನ್ನು ಅವಮಾನಿಸಿರುವ ಘಟನೆ ನಡೆದಿದೆ.

ದಿನಸಿ ಸಾಮಾನುಗಳನ್ನು ಕೊಳ್ಳಲು ನಗರದ ಚಾಮುಂಡಿಪುರಂ ಸರ್ಕಲ್ ನಲ್ಲಿರುವ ಸೂಪರ್ ಮಾರ್ಕೆಟ್ ಗೆ ನಾಗಾಲ್ಯಾಂಡ್ ನ ವಿದ್ಯಾರ್ಥಿಗಳು ಆಗಮಿಸಿದ್ದರು. ಈ ವೇಳೆ ಸೆಕ್ಯುರಿ ಗಾರ್ಡ್ ಒಬ್ಬ ಅವರನ್ನು ತಡೆದು ಒಳಬಿಡಲು ನಿರಾಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ವಿದ್ಯಾರ್ಥಿಗಳು "ನಮ್ಮನ್ನು ಏಕೆ ಒಳಬಿಡುವುದಿಲ್ಲ, ನಾವುಗಳು ನಿಮ್ಮ ಹಾಗೆ ಮನುಷ್ಯರು, ನಮಗೂ ಆಹಾರ ಬೇಕು" ಎಂದು ವಾದಿಸಿದ್ದಾರೆ. ಇದಕ್ಕೂ ಬಗ್ಗದ ಸೆಕ್ಯುರಿಟಿ ಗಾರ್ಡ್ ಒಳಬಿಡದೆ ಸತಾಯಿಸುತ್ತಿರುವ ದೃಶ್ಯವನ್ನು ಸಾರ್ವಜನಿಕರೊಬ್ಬರು ವಿಡೀಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ವಿಡೀಯೋ ವೈರಲ್ ಆಗುತಿದ್ದಂತೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೂಪರ್ ಮಾರ್ಕೆಟ್ ಸಿಬ್ಬಂದಿ ಮತ್ತು ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News