ಓ ಮೆಣಸೇ...

Update: 2020-03-29 17:44 GMT

ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗಾಗಿ ನಾನು ಇದೇ ಮೊದಲ ಬಾರಿಗೆ ದಿನ ಪೂರ್ತಿ ಮನೆಯಲ್ಲೇ ಇದ್ದು ಮಕ್ಕಳ ಜೊತೆ ಸಮಯ ಕಳೆದೆ

- ನಳಿನ್ ಕುಮಾರ್ ಕಟೀಲು , ಸಂಸದ 

ದೇಶದ ಜನರು ಸರಕಾರದ ನೆರವಿಗಾಗಿ ಕೈ ಚಾಚುತ್ತಿರುವಾಗ, ಜನಪ್ರತಿನಿಧಿಗಳೆಲ್ಲ ಮಕ್ಕಳ ಜೊತೆಗೆ ಸಮಯ ಕಳೆಯುತ್ತಿರುವುದೇ ಇಂದಿನ ದುರಂತಗಳಿಗೆ ಮುಖ್ಯ ಕಾರಣ.


ಕೊರೋನ ವೈರಸ್ ಸೋಂಕಿನ ವಿರುದ್ಧ ಹೋರಾಡುವ ದೇಶದ ಪ್ರತಿಯೊಬ್ಬ ಪ್ರಜೆಯೂ ಸೈನಿಕ ಇದ್ದಂತೆ - ನರೇಂದ್ರ ಮೋದಿ, ಪ್ರಧಾನಿ

ಸೈನಿಕರಿಗೆ ಅತ್ಯಾಧುನಿಕ ಆಯುಧಗಳನ್ನು ನೀಡುವುದು ನಿಮ್ಮ ಕರ್ತವ್ಯವಲ್ಲವೆ?


ವಿವಿಗಳಲ್ಲಿ ಹಾಲಿ ಜನರ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂಬ ಭಾವನೆ ಹೋಗಲಾಡಿಸಬೇಕಾಗಿದೆ - ಡಾ.ಸಿ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ ಅನಗತ್ಯ ಉಪಮುಖ್ಯಮಂತ್ರಿಗಳ ಕಾರಣದಿಂದಲೂ ವ್ಯರ್ಥವಾಗುತ್ತಿದೆ ಎಂಬ ಭಾವನೆ ಜನರ ಮನದಲ್ಲಿದೆ.


ಯಾವುದೇ ಕಾರಣಕ್ಕೂ ನಗರವಾಸಿಗಳು ಕೊರೋನ ಮುಕ್ತವಾಗಿರುವ ಹಳ್ಳಿಗಳತ್ತ ಹೋಗಬಾರದು- ಯಡಿಯೂರಪ್ಪ, ಮುಖ್ಯಮಂತ್ರಿ

ನಾವು ಹಳ್ಳಿಗಳಿಗೆ ಹೋಗಿ ಅದನ್ನು ಕೊರೋನ ಯುಕ್ತ ಹಳ್ಳಿಗಳಾಗಿ ಪರಿವರ್ತಿಸುತ್ತೇವೆ ಎಂದು ನಗರದ ಜನರು ಭರವಸೆ ನೀಡುತ್ತಿದ್ದಾರೆ.


ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ನಾವೆಲ್ಲ ಮನುಷ್ಯರಾಗಿ ಚಿಂತಿಸುವ ಸಮಯ ಬಂದಿದೆ - ಶೋಯೆಬ್ ಅಖ್ತರ್, ಪಾಕ್ ಮಾಜಿ ಕ್ರಿಕೆಟಿಗ ಕೊರೋನ ವೈರಸ್ ಇಲ್ಲವಾದ ಬಳಿಕ ಮತ್ತೆ ಭಾರತ-ಪಾಕಿಸ್ತಾನಿಗಳಾಗಿ ಚಿಂತಿಸಬಹುದೆ?


ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ದಲ್ಲಾಳಿ ಹಾವಳಿ ನಿಯಂತ್ರಣಕ್ಕೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು - ಆರ್. ಅಶೋಕ್, ಸಚಿವ 

ಹಾವಳಿ ನಿಯಂತ್ರಿಸುವುದಕ್ಕಾಗಿಯೇ ದಲ್ಲಾಳಿಗಳನ್ನು ನೇಮಕ ಮಾಡುವ ಉದ್ದೇಶವಿರಬೇಕು.


ಪ್ರಧಾನಿ ಮೋದಿ ಗಂಭೀರ ಸಮಸ್ಯೆಯನ್ನು ಹಬ್ಬದ ವಾತಾವರಣವಾಗಿ ಪರಿವರ್ತಿಸುತ್ತಿದ್ದಾರೆ -ಸಂಜಯ್ ರಾವತ್,ಶಿವಸೇನಾ ಮುಖಂಡ ಗಂಭೀರ ಸಮಸ್ಯೆಗಳೆಲ್ಲ ಅವರ ಪಾಲಿಗೆ ಹಬ್ಬಗಳಂತೆ.


ಲಾಕ್‌ಡೌನ್ ಅನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ - ನರೇಂದ್ರ ಮೋದಿ, ಪ್ರಧಾನಿ

ಕೊರೋನವನ್ನು ತಾವು ಗಂಭೀರವಾಗಿ ಪರಿಗಣಿಸಿದ್ದೀರಾ?


ನಮಗೆ ಸಾಮರ್ಥ್ಯವಿಲ್ಲದಿದ್ದಾಗ ಸಾಮರ್ಥ್ಯವುಳ್ಳವರ ಸಹಾಯ ತೆಗೆದುಕೊಳ್ಳಬೇಕು - ಶ್ರೀ ರವಿಶಂಕರ್ ಗುರೂಜಿ, ಆರ್ಟ್‌ಆಫ್ ಲಿವಿಂಗ್ ಸಂಸ್ಥಾಪಕ ತಾವು ಆಗಾಗ ರಾಜಕಾರಣಿಗಳ ಸಹಾಯ ಪಡೆದುಕೊಳ್ಳುವುದು ಇದೇ ಕಾರಣಕ್ಕಿರಬೇಕು.


ಆರು ವರ್ಷಗಳಿಂದ ಪ್ರಧಾನಿ ಮೋದಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ಧಾರೆ- ಯಡಿಯೂರಪ್ಪ, ಮುಖ್ಯಮಂತ್ರಿ ಕಪ್ಪು ಕಾಗದದಲ್ಲಿ ಕಪ್ಪು ಚುಕ್ಕೆಯನ್ನು ಗುರುತಿಸುವುದು ಹೇಗೆ?


ಒಳ್ಳೆಯ ಆಯ್ಕೆಗಳು ಸಿಗದೇ ಇದ್ದಾಗ ಸಿಕ್ಕ ಆಯ್ಕೆಗಳನ್ನೇ ಒಳ್ಳೆಯದು ಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ - ಹೃತಿಕ್ ರೋಷನ್ , ನಟ

ಪತ್ನಿಯ ಆಯ್ಕೆ ವಿಷಯದಲ್ಲೂ ಇದು ಅನ್ವಯವಾಗಲಿ.


ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಬೇಕು. ಬಡವರನ್ನು ಪ್ರೀತಿಸಬೇಕು
- ನರೇಂದ್ರ ಮೋದಿ, ಪ್ರಧಾನಿ
ಮತ್ತೇಕೆ ತಡ, ಕಷ್ಟದಲ್ಲಿರುವ ವಲಸೆ ಕಾರ್ಮಿಕರಿಗೆ ಸ್ಪಂದಿಸಬಾರದೆ?


ವಲಸೆ ಕಾರ್ಮಿಕರ ನೆರವಿಗೆ ಕೇಂದ್ರ ಬದ್ಧ - ಅಮಿತ್ ಶಾ, ಗೃಹ ಸಚಿವ
ವಲಸೆ ಕಾರ್ಮಿಕರ ವಿರುದ್ಧ ಲಾಠಿ ಬೀಸುತ್ತಿರುವ ಪೊಲೀಸರು ನಿಮ್ಮ ಬದ್ಧತೆಯನ್ನು ಎತ್ತಿ ಹಿಡಿದಿದ್ದಾರೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...