ಬಾಗಲಕೋಟೆ: ಕಾಸರಗೋಡಿನಿಂದ ಆಗಮಿಸಿದ್ದ 87 ಮಂದಿ ಕ್ವಾರಂಟೈನ್‍ನಲ್ಲಿ
Update: 2020-03-29 23:22 IST
ಬಾಗಲಕೋಟೆ, ಮಾ.3: ರಾಜ್ಯ ಸರಕಾರ ಕೇರಳ ಗಡಿಯನ್ನು ಬಂದ್ ಮಾಡಲು ನಿರ್ಧಾರ ಕೈಗೊಂಡಿದೆ. ಈ ನಡುವೆಯೇ ಕಾಸರಗೋಡಿನಿಂದ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ್ದ 87 ಜನರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.
ಕೇರಳದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಕಾಸರಗೋಡಿನಿಂದ ಬರುವವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಯಾಕೆಂದರೆ ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಹೀಗಾಗಿ, ಕಾಸರಗೋಡು, ಗೋವಾ ಮತ್ತು ಮಂಗಳೂರಿನಿಂದ ಬಂದವರಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕರಡಿ ಗ್ರಾಮದೊಳಗೆ ಪ್ರವೇಶ ನಿಷೇಧಿಸಲಾಗಿದೆ. ಜತೆಗೆ ಇಲ್ಲಿಂದ ಬರುವವರ ಸಂಬಂಧಿಕರ ಮಾಹಿತಿ ನೀಡುವಂತೆ ಡಂಗೂರ ಸಾರಿಸಲಾಗಿದೆ. ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ 87 ಜನರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.