×
Ad

ಕರ್ತವ್ಯ ಲೋಪ: ಏಳು ಪೊಲೀಸರ ಅಮಾನತು

Update: 2020-03-29 23:33 IST

ಚಾಮರಾಜನಗರ, ಮಾ.29: ಕರ್ತವ್ಯ ಲೋಪ ಆರೋಪದ ಮೇಲೆ ಏಳು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ವೇಳೆ ಕರ್ತವ್ಯ ಲೋಪ ಮಾಡಿದ ಆರೋಪದ ಮೇರೆಗೆ ಪೊಲೀಸರಿಗೆ ಅಮಾನತು ಮಾಡಲಾಗಿದೆ.

ಅನುಮತಿ ಇಲ್ಲದೆ ಹೆಚ್ಚು ವಾಹನಗಳನ್ನು ಬಿಟ್ಟಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ರವರು ಅಮಾನತು ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಹಾಗೂ ಪುಣಜನೂರು ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಅಮಾನತು ಗೊಂಡವರು.

ಚಾಮರಾಜನಗರ ಗ್ರಾಮಾಂತರ ಪೋಲೀಸ್ ಠಾಣೆಯ ಎ.ಎಸ್ಸೈ ಕೂಸಪ್ಪ, ಸೈಯದ್ ರಫಿ, ಪ್ರಸಾದ್, ಅಬ್ದುಲ್ ಖಾದರ್, ಹಾಗೂ ಚಾಮರಾಜನಗರ ಪೂರ್ವ ಠಾಣೆಯ ಮಹಾದೇವಸ್ವಾಮಿ, ಮಹೇಶ, ಡಿವೈಎಸ್‌ಪಿ ಕಚೇರಿಯ ರೇವಣ್ಣಸ್ವಾಮಿ ಅಮಾನತುಗೊಂಡ ಪೋಲೀಸರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News