ಚಿಕ್ಕಮಗಳೂರು: ಇದುವರೆಗೂ ಕೊರೋನ ಸೋಂಕಿತರಿಲ್ಲ

Update: 2020-03-30 14:44 GMT

ಚಿಕ್ಕಮಗಳೂರು: ಕೊರೊನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಸೋಮವಾರ ಇಬ್ಬರನ್ನು ಸ್ಕ್ರೀನಿಂಗ್‍ಗೆ ಒಳಪಡಿಸಲಾಗಿದ್ದು ಜಿಲ್ಲೆಯಲ್ಲಿ ಇದುವರೆಗೂ 273 ಜನರನ್ನು ಸ್ಕ್ರೀನಿಂಗ್‍ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

28 ದಿನಗಳ ನಿಗಾ ಅವಧಿಯನ್ನು ಸೋಮವರ ಇಬ್ಬರು ಪೂರೈಸಿರುವುದೂ ಸೇರಿದಂತೆ ಇದುವರೆಗೂ 16 ಮಂದಿ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇಬ್ಬರನ್ನು ಮನೆಯಲ್ಲಿಯೇ ತಪಾಸಣೆ ನಡೆಸಿದ್ದು, ಇವರು ಸೇರಿದಂತೆ 259 ಮಂದಿ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ. 9 ಜನರನ್ನು ಐಸೋಲೆಟೆಡ್ ನಿಗಾ ಘಟಕದಲ್ಲಿ ನಿಗಾವಹಿಸಲಾಗಿದೆ. ಇದುವರೆಗೂ 9 ಜನರ ರಕ್ತದ ಮಾದರಿ ಮತ್ತು ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳಿಸಿದ್ದು, 9 ಮಂದಿಯ ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಅಂಶ ಬಂದಿದೆ. ಜಿಲ್ಲೆಯಲ್ಲಿ ಇದುವರೆಗೆ ಯಾರೊಬ್ಬರಲ್ಲೂ ಕೊರೋn ವೈರಸ್ ಸೋಂಕು ಇರುವುದು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News