ಕೊರೋನ ವೈರಸ್: ಸರ್ಕಾರದ ನಡೆಯನ್ನು ಪ್ರಶ್ನಿಸಿದ ಆರೋಪ; ಶಿಕ್ಷಕರಿಬ್ಬರ ಅಮಾನತ್ತು

Update: 2020-03-30 17:15 GMT

ಶಿವಮೊಗ್ಗ: ಕೊರೋನ ವೈರಸ್ ತಡೆಗಟ್ಟುವಲ್ಲಿ ಸರ್ಕಾರದ ನಡೆಯನ್ನು ಪ್ರಶ್ನಿಸಿದ ಆರೋಪದಲ್ಲಿ ಶಿಕ್ಷಕರಿಬ್ಬರನ್ನು ಅಮಾನತ್ತು ಮಾಡಲಾಗಿದೆ.

ಮಾರಣಾಂತಿಕ ಕೊರೋನ ವೈರಸ್ ಸೋಂಕು ನಿಯಂತ್ರಿಸುವಲ್ಲಿ ಹಾಗೂ ರಾಜ್ಯದ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಆಡಳಿತಾರೂಢ ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಮುಜುಗರ ಉಂಟು ಮಾಡುವಂತೆ ವಾಟ್ಸ್ ಆ್ಯಪ್ ಗುಂಪಿನಲ್ಲಿ ಸಂದೇಶ ರವಾನಿಸಿದ ಆರೋಪದಲ್ಲಿ ಸೊರಬ ತಾಲೂಕು ಆನವಟ್ಟಿಯ ಶಿಕ್ಷಕರಿಬ್ಬರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಆದೇಶ ಹೊರಡಿಸಿದ್ದಾರೆ.

ಕೊರೋನ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಮಕ್ಕಳಿಗಷ್ಟೇ ಅಲ್ಲದೆ ಅಲ್ಲಿನ ಶಿಕ್ಷಕರಿಗೂ ರಜೆ ನೀಡಿ ಮನೆಯಲ್ಲಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಾಗಿರುವ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವಂತೆ ಆದೇಶ ಹೊರಡಿಸಲಾಗಿತ್ತು. ಇಲಾಖೆಯ ಅಧಿಕಾರಿಗಳ ಈ ಆದೇಶವನ್ನು ಧಿಕ್ಕರಿಸಿ ವಹಿಸಿದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸದೆ ಕೆಲವು ಸಾಮಾಜಿಕ ಜಾಲತಾಣಗಳ ಮೂಲಕ ಅಸಂಬದ್ಧ ವಿಷಯವನ್ನು ರವಾಸುತ್ತಿದ್ದ ಆರೋಪದಲ್ಲಿ ಸೊರಬ ತಾಲೂಕು ತಿಮ್ಮಾಪುರ ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕ ಢಾಕ್ಯಾನಾಯ್ಕ ಮತ್ತು ಈ ಸಂದೇಶವನ್ನು ಪ್ರೇರೇಪಿಸುವಂತೆ ಸಂದೇಶ ರವಾನಿಸಿದ ವಾಟ್ಸ್ ಆ್ಯಪ್ ಗುಂಪಿನ ಅಡ್ಮಿನ್ ಹಾಗೂ ಸಿ.ಆರ್.ಪಿ. ರಾಜು, ಆನವಟ್ಟಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News