ವಲಸೆ ಕಾರ್ಮಿಕರ ದುರಂತ ಪಯಣ

Update: 2020-03-30 17:38 GMT

ಕೊರೋನ ವೈರಸ್ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿದ ಬಳಿಕ ದುಡಿಮೆಯಿಲ್ಲದೆ, ಅರೆಹೊಟ್ಟೆಯಲ್ಲಿ ನಗರಪ್ರದೇಶಗಳಿಂದ ತಮ್ಮ ಹಳ್ಳಿಗಳಿಗೆ ಗುಳೆ ಹೋಗುತ್ತಿರುವ ಸಾವಿರಾರು ವಲಸಿಗ ಕಾರ್ಮಿಕರು ಅತ್ಯಂತ ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮಹಾನಗರಗಳಲ್ಲಿ ಬದುಕಲು ದಾರಿಕಾಣದೆ, ಊರು ಸೇರುವ ಪ್ರಯತ್ನದಲ್ಲಿ ಕನಿಷ್ಠ 22 ಮಂದಿ ವಲಸಿಗ ಕಾರ್ಮಿಕರು ಹಾಗೂ ಅವರ ಕುಟುಂಬದವರು ಮೃತಪಟ್ಟ ಅಥವಾ ಪಘಾತಕ್ಕೀಡಾದ ಹಲವು ಘಟನೆಗಳು ವರದಿಯಾಗಿವೆ.   ಮಕ್ಕಳನ್ನು ಹೊತ್ತುಕೊಂಡ ವಲಸಿಗ ಕಾರ್ಮಿಕರು, ಗರ್ಭಿಣಿಯರು, ಮಕ್ಕಳು ಹಸಿವು, ಬಾಯಾರಿಕೆಯನ್ನು ಸಹಿಸಿಕೊಂಡು ಹಳ್ಳಿ ಕಡೆಗೆ ಹೆಜ್ಜೆಹಾಕುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಲ್ಲಿ ಹಳ್ಳಿಗಳಿಗೆ ವಲಸೆ ಹೋಗುವ ಸಂದರ್ಭದಲ್ಲಿ ಹಸಿವು ಹಾಗೂ ಅನಾರೋಗ್ಯದಿಂದಾಗಿ ಐವರು ಮಕ್ಕಳು ಸೇರಿದಂತೆ 22 ಮಂದಿ ವಲಸಿಗ ಕಾರ್ಮಿಕರು ಸಾವನ್ನಪ್ಪಿದ್ದಾರೆಂದು ವರದಿಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor