ರಾಜ್ಯದಲ್ಲಿ ನೂರರ ಗಡಿದಾಟಿದ ಕೊರೋನ ಸೋಂಕಿತರ ಸಂಖ್ಯೆ

Update: 2020-03-31 15:27 GMT

ಬೆಂಗಳೂರು, ಮಾ.31: ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಮಂಗಳವಾರ 101 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದರಿಂದ ಸ್ವಲ್ಪಮಟ್ಟಿಗೆ ನಿರಾಳವಾಗಿದ್ದ ಜನರಲ್ಲಿ ಇದೀಗ ಮತ್ತೆ ಆತಂಕದ ಛಾಯೆ ಮನೆ ಮಾಡಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಇನ್ನು ಮೂರನೇ ಹಂತಕ್ಕೆ ತಲುಪಲಿದೆಯಾ ಎಂಬ ಅನುಮಾನ ಮೂಡುವ ಸ್ಥಿತಿಗೆ ತಲುಪಿದೆ.

ಕೊರೋನ ಸೋಂಕಿತರ ವಿವರ:
ರೋಗಿ 89: ಹೊಸಪೇಟೆಯ ನಿವಾಸಿಯಾದ 52 ವರ್ಷದ ಪುರುಷರಾಗಿದ್ದಾರೆ. ಇವರು ಮಾ.16 ರಂದು ಬೆಂಗಳೂರಿಗೆ ಬಸ್‍ನಲ್ಲಿ ಪ್ರಯಾಣಿಸಿದ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ.

ರೋಗಿ 90: ಹೊಸಪೇಟೆಯ ನಿವಾಸಿಯಾದ 48 ವರ್ಷದ ಮಹಿಳೆಯಾಗಿದ್ದಾರೆ. ಇವರು ಮಾ.16 ರಂದು ಬೆಂಗಳೂರಿಗೆ ಬಸ್‍ನಲ್ಲಿ ಪ್ರಯಾಣಿಸಿದ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ.

ರೋಗಿ 91: 26 ವರ್ಷದ ಮಹಿಳೆಯಾಗಿದ್ದು, ಹೊಸಪೇಟೆಯ ನಿವಾಸಿಯಾಗಿದ್ದಾರೆ. ಇವರು ಮಾ.16 ರಂದು ಬೆಂಗಳೂರಿಗೆ ಬಸ್‍ನಲ್ಲಿ ಪ್ರಯಾಣಿಸಿದ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ. ಈ ಮೂರು ಮಂದಿಯನ್ನು ಬಳ್ಳಾರಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ 92: ಬೆಂಗಳೂರು ಜಿಲ್ಲೆಯ ನಿವಾಸಿಯಾದ 40 ವರ್ಷದ ಪುರುಷರಾಗಿದ್ದಾರೆ. ಇವರು ಈ ಹಿಂದೆ ಸೋಂಕು ದೃಢಪಟ್ಟ ರೋಗಿ 59 ರ ಸಂಪರ್ಕಿತ ವ್ಯಕ್ತಿಯಾಗಿದ್ದು, ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 93: ಬೆಂಗಳೂರಿನ 19 ವರ್ಷದ ಯುವಕನಾಗಿದ್ದು, ನ್ಯೂಯಾರ್ಕ್, ಯುಎಸ್‍ಎದಿಂದ ಮಾ.22 ರಂದು ಬೆಂಗಳೂರಿಗೆ ಆಗಮಿಸಿದ್ದರು. ಇವರನ್ನು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 94: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನಿವಾಸಿ 40 ವರ್ಷದ ಮಹಿಳೆಯಾಗಿದ್ದು, ಇವರನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ.

ರೋಗಿ 95: ಮೈಸೂರು ಜಿಲ್ಲೆಯ ನಿವಾಸಿ 35 ವರ್ಷದ ಪುರುಷರಾಗಿದ್ದಾರೆ.

ರೋಗಿ 96: ಮೈಸೂರು ಜಿಲ್ಲೆಯ ನಿವಾಸಿ 41 ವರ್ಷದ ಪುರುಷರಾಗಿದ್ದು, ಇವರಿಬ್ಬರೂ ಈ ಹಿಂದೆ ಸೋಂಕು ದೃಢಪಟ್ಟ ರೋಗಿ 52 ರ ಸಂಪರ್ಕಿತ ವ್ಯಕ್ತಿಗಳಾಗಿದ್ದಾರೆ. ಇವರನ್ನು ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 97: ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಯಾಗಿರುವ 34 ವರ್ಷದ ಪುರುಷರಾಗಿದ್ದು, ದುಬೈ ದೇಶಕ್ಕೆ ಪ್ರಯಾಣ ಬೆಳೆಸಿ ಮಾ.18 ರಂದು ಭಾರತಕ್ಕೆ ಹಿಂದುರಿಗಿದ್ದರು. ಇವರನ್ನು ದಕ್ಷಿಣ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 98: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ 26 ವರ್ಷದ ಪುರುಷರಾಗಿದ್ದು, ದುಬೈ ಪ್ರಯಾಣ ಮಾಡಿ ಮಾ.20 ರಂದು ಹಿಂದುರಿಗಿದ್ದರು. ಇವರನ್ನು ಉತ್ತರ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ.

ರೋಗಿ 99: ಕಲಬುರಗಿ ಜಿಲ್ಲೆಯ ನಿವಾಸಿಯಾದ 60 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟ ರೋಗಿ 9 ಅವರ ಪತ್ನಿಯಾಗಿದ್ದಾರೆ. ಇವರನ್ನು ಕಲಬುರಗಿಯ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ.

ರೋಗಿ 100: ಬೆಂಗಳೂರಿನ ನಿವಾಸಿಯಾದ 40 ವರ್ಷದ ಪುರುಷರಾಗಿದ್ದಾರೆ. ದುಬೈ ಪ್ರಯಾಣ ಬೆಳೆಸಿ ಮಾ.20 ರಂದು ಬೆಂಗಳೂರಿಗೆ ಆಗಮಿಸಿದ್ದರು. ನಗರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ.

ರೋಗಿ 101: ಬೆಂಗಳೂರಿನ ನಿವಾಸಿಯಾದ 62 ವರ್ಷದ ಮಹಿಳೆಯಾಗಿದ್ದಾರೆ. ವಿವರವಾದ ವೈದ್ಯಕೀಯ ತಪಾಸಣೆ ತನಿಖೆಯಲ್ಲಿದ್ದು ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದೆ.

ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮ ಅಡಿಯಲ್ಲಿ ಕಂಡುಬರುವ ಅತ್ಯಂತ ತೀವ್ರ ಸ್ವರೂಪದ ಉಸಿರಾಟದ ಸಮಸ್ಯೆ ಪ್ರಕರಣಗಳನ್ನು ಕಡ್ಡಾಯವಾಗಿ ಜಿಲ್ಲಾ ಕಣ್ಗಾವಲು ಅಧಿಕಾರಿ ಅವರಲ್ಲಿ ವರದಿ ಮಾಡುವಂತೆ ಆದೇಶಿಸಿರುತ್ತಾರೆ. ಅಲ್ಲದೇ, ಈ ಸಮಸ್ಯೆಗೆ ರೋಗ ನಿರೋಧಕತೆಗಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಪ್ರಾಯೋಗಿಕ ಬಳಕೆಗಾಗಿ ಶಿಫಾರಸ್ಸು ಮಾಡಿದ್ದಾರೆ. ಉಸಿರಾಟದ ಸಮಸ್ಯೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಕ್ಲಿನಿಕಲ್ ನಿರ್ವಹಣೆಗಾಗಿ ಐಸಿಯು ಸೌಲಭ್ಯವಿರುವ ಜಿಲ್ಲಾ ಮಟ್ಟದ ಆಸ್ಪತ್ರೆಗೆ ಅಥವಾ ವೈದ್ಯಕೀಯ ಕಾಲೇಜುಗಳಿಗೆ ಕಳುಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಜಿಲ್ಲಾವಾರು ಪಟ್ಟಿ:
ಬೆಂಗಳೂರು      : 45
ಮೈಸೂರು        : 14
ಚಿಕ್ಕಬಳ್ಳಾಪುರ   : 9
ದಕ್ಷಿಣಕನ್ನಡ      : 8
ಉತ್ತರಕನ್ನಡ     : 8
ಕಲಬುರಗಿ         : 4
ದಾವಣಗೆರೆ       : 3
ಉಡುಪಿ           : 3
ಬಳ್ಳಾರಿ           : 3
ತುಮಕೂರು      : 2
ಕೊಡಗು          : 1
ಧಾರವಾಡ       : 1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News