ಎ.14ರವರೆಗೆ ಮಸೀದಿ, ದರ್ಗಾಗಳಲ್ಲಿ ಪ್ರಾರ್ಥನೆ ನಿರ್ಬಂಧ ವಿಸ್ತರಣೆ

Update: 2020-03-31 15:32 GMT

ಬೆಂಗಳೂರು, ಮಾ.31: ಕೊರೋನ ಸೋಂಕು(ಕೋವಿಡ್-19) ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರಕಾರ ಮಾ.23ರಂದು ಹೊರಡಿಸಿದ ಆದೇಶದಂತೆ ಎ.14ರವರೆಗೆ ರಾಜ್ಯದ ಮಸೀದಿಗಳಲ್ಲಿ ಶುಕ್ರವಾರದ ಪ್ರಾಥನೆ ಸಹಿತ ಸಾಮೂಹಿಕ ಪಾರ್ಥನೆಯನ್ನು ನಿರ್ಬಂಧಿಸಿರುವುದನ್ನು ತಪ್ಪದೆ ಪಾಲಿಸಬೇಕೆಂದು ರಾಜ್ಯದ ಮಸೀದಿ, ದರ್ಗಾಗಳ ವ್ಯವಸ್ಥಾಪಕ ಸಮಿತಿಗಳಿಗೆ ರಾಜ್ಯ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಸ್ಲಾವುದ್ದೀನ್ ಜೆ. ಗದ್ಯಾಳ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೈಕೋರ್ಟ್ ಹಾಗೂ ಕೇಂದ್ರ ಸರಕಾರದ ಆದೇಶವನ್ನು ರಾಜ್ಯದ ಎಲ್ಲ ವಕ್ಫ್ ಸಂಸ್ಥೆಗಳ ವ್ಯವಸ್ಥಾಪನ ಸಮಿತಿಗಳು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಚಾಚುತಪ್ಪದೆ ಪಾಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕೊರೋನ ಸೋಂಕಿನ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಸಾರ್ವಜನಿಕರು ಚಾಚುತಪ್ಪದೇ ಪಾಲಿಸಲು ಪ್ರತಿದಿನ 3 ಭಾಷೆಗಳಲ್ಲಿ 4 ಬಾರಿ ಮಸೀದಿಯ ಧ್ವನಿವರ್ಧಕದ ಮೂಲಕ ಸಾರಲು ಆದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News