ಬಳ್ಳಾರಿ ಚೆಕ್ ಪೋಸ್ಟ್ ಗಳಲ್ಲಿ ಸರಕು-ಸಾಮಗ್ರಿ ವಾಹನ ನಿರ್ಬಂಧಿಸಬೇಡಿ: ಡಿಸಿ ಆದೇಶ

Update: 2020-03-31 18:24 GMT

ಬಳ್ಳಾರಿ, ಮಾ.31: ಕೊರೋನ ವೈರಸ್(ಕೋವಿಡ್-19) ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾದ್ಯಂತ ಚೆಕ್ ಪೋಸ್ಟ್ ಗಳನ್ನು ಪ್ರಾರಂಭಿಸಲಾಗಿದ್ದು, ಚೆಕ್ ಪೋಸ್ಟ್ ಗಳ ಮೂಲಕ ಹೋಗುವ ಸರಕು-ಸಾಮಗ್ರಿಗಳ ವಾಹನಗಳನ್ನು ಅಥವಾ ಖಾಲಿ ಗೂಡ್ಸ್ ವಾಹನಗಳನ್ನು ಚೆಕ್ ಪೋಸ್ಟ್ ಗಳಲ್ಲಿ ನಿರ್ಬಂಧಿಸಬಾರದು. ಚೆಕ್ ಪೋಸ್ಟ್ ಗಳಲ್ಲಿ ನಿಯೋಜಿತ ಸಿಬ್ಬಂದಿಗಳು ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News