ಶಿವಮೊಗ್ಗದಲ್ಲಿ ನಿರಾಶ್ರಿತರಿಗೆ ಇನ್ನು ಸಾರ್ವಜನಿಕರು ಊಟ ಕೊಡುವಂತಿಲ್ಲ!: ಕಾರಣವೇನು ಗೊತ್ತೇ ?

Update: 2020-04-01 12:09 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಎ.1: ನಿರಾಶ್ರಿತರಿಗೆ ಸಾರ್ವಜನಿಕರು ಊಟ ನೀಡದಿರಲು ಸೂಚಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆಯು, ಮಹಾನಗರ ಪಾಲಿಕೆಯಲ್ಲಿ ತೆರೆಯಲಾಗಿರುವ ಕೇಂದ್ರಕ್ಕೆ ಸಿದ್ದಪಡಿಸಿದ ಆಹಾರ ಹೊರತುಪಡಿಸಿ ಊಟದ ಸಾಮಾಗ್ರಿಗಳ ಕಿಟ್ ಅನ್ನು ನೀಡುವಂತೆ ಪಾಲಿಕೆ ಕೋರಿದೆ.

ಪಾಲಿಕೆಯ ಆಯುಕ್ತ ಚಿದಾನಂದ ವಟಾರೆ ಅವರು ಬುಧವಾರ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ಕೊರೋನ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಸರ್ಕಾರದ ಆದೇಶದನುಸಾರ ಜಿಲ್ಲೆಯಾದ್ಯಂತ ಲಾಕ್‌ ಡೌನ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಕೆಲವರು ಸಂಘ ಸಂಸ್ಥೆಗಳ ಹೆಸರಿನಲ್ಲಿ ಕಾರ್ಮಿಕರಿಗೆ ಹಾಗೂ ನಿರಾಶ್ರಿತ ಜನರಿಗೆ ಊಟ ಮತ್ತು ಊಟದ ಸಾಮಾಗ್ರಿಗಳನ್ನು ನೀಡುತ್ತಿರುವ ಮಾಹಿತಿ ಬಂದಿದೆ. ಇದು ಲಾಕ್‌ ಡೌನ್ ನಿರ್ದೇಶನವನ್ನು ಉಲ್ಲಂಘಿಸಿದಂತಾಗುತ್ತದೆ. ನಿರಾಶ್ರಿತರು, ಕೂಲಿ ಕಾರ್ಮಿಕರಿಗೆ ಊಟ ಹಾಗೂ ಇತರೆ ಸಾಮಾಗ್ರಿಗಳನ್ನು ಪಾಲಿಕೆಯ ಗಮನಕ್ಕೆ ಬಾರದಂತೆ ವಿತರಿಸುವುದು ಕಂಡು ಬಂದಲ್ಲಿ ಅವರ ವಿರುದ್ಧ ಐಪಿಸಿ ಕಾಯ್ದೆ 269, 270, 271ರ ಅಡಿ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News