ಮೈಸೂರಿನಲ್ಲಿ ಮತ್ತೆ ಮೂವರಲ್ಲಿ ಕೊರೋನ ದೃಢ: 19ಕ್ಕೆ ಏರಿದ ಸೋಂಕಿತರ ಸಂಖ್ಯೆ

Update: 2020-04-01 15:15 GMT
ಸಾಂದರ್ಭಿಕ ಚಿತ್ರ

ಮೈಸೂರು,ಎ.1: ಮೈಸೂರು ಜಿಲ್ಲೆಯಲ್ಲಿ ಮತ್ತೆ ಮೂವರಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದು, ಈ ಮೂರು ಪ್ರಕರಣ ಸೇರಿ ಇದುವರೆಗೆ ಒಟ್ಟು 19 ಜನರು ಕೊರೋನ ಸೋಂಕಿಗೆ ತುತ್ತಾದಂತಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಈ ಸಂಬಂಧ ಬುಧವಾರ ಮಾಧ್ಯಮ ಹೇಳಿಕೆ ಹೊರಡಿಸಿರುವ ಅವರು, ನಂಜನಗೂಡು ಕೈಗಾರಿಕಾ ಪ್ರದೇಶದ ಜ್ಯುಬಿಲಿಯಂಟ್ ನೌಕರನಿಂದ ಇನ್ನುಳಿದವರಿಗೂ ಕೊರೋನ ಸೋಂಕು ತಗುಲಿದ್ದು, ಈಗ 27 ವರ್ಷದ ಯುವಕ, 33 ವರ್ಷ ಮತ್ತು 32 ವರ್ಷದ ಯವಕನಿಗೆ ಕೊರೋನ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಒಟ್ಟು 19 ಜನರು ಕೊರೋನ ಸೋಂಕಿಗೆ ಗುರಿಯಾಗಿದ್ದಾರೆ. ಈ ಹಿಂದೆ ಪಾಸಿಟಿವ್ ಬಂದಿದ್ದ ಜ್ಯುಬಿಲಿಯಂಟ್ ನೌಕರರ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.

ಕೊರೋನ ಸೋಂಕಿಗೆ ತುತ್ತಾಗಿರುವವರನ್ನು ನಗರದ ನೂತನ ಕೋವಿಡ್-19 ಆಸ್ಪತ್ರೆಯ ಐಸೊಲೇಶನ್‍ನಲ್ಲಿ ಚಿಕಿತ್ಸೆ ನೀಡಲಾಗುತಿದ್ದು, ಅವರೆಲ್ಲರೂ ಆರೋಗ್ಯವಾಗಿದ್ದಾರೆ. ಪಾಸಿಟಿವ್ ಬಂದಿರುವ ಹತ್ತಿರದವರು ಮತ್ತು ಅವರ ಟ್ರಾವೆಲ್ ಹಿಸ್ಟರಿ ಪಡೆದು ಕೆಲವರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದ್ದು, ಅವರೆಲ್ಲರೂ ಸಹ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News