ಕೈಗೆಟುಕುವ ಬೆಲೆಗೆ ಆಲ್ಕೋಹಾಲ್ ರಹಿತ 'ಶುದ್ಧಿ' ಸ್ಯಾನಿಟೈಸರ್ ಮಾರುಕಟ್ಟೆಗೆ

Update: 2020-04-01 16:44 GMT

ಬೆಂಗಳೂರು, ಎ.1: ಕೊರೋನ ( ಕೋವಿಡ್-19 ) ಒಳಗೊಂಡಂತೆ ಯಾವುದೇ ಸೋಂಕು ತಗುಲದಂತೆ ಬಳಸುವ ಆಲ್ಕೋಹಾಲ್-ರಹಿತ ಸ್ಯಾನಿಟೈಸರ್ ಇದೀಗ ಮಾರುಕಟ್ಟೆಗೆ ಬಂದಿದೆ. 

ಶುಚಿತ್ವ ಕಾಪಾಡಿಕೊಳ್ಳಲು ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಗಳು ಮಾತ್ರವಲ್ಲ, ಆಲ್ಕೋಹಾಲ್ ಅಂಶ ರಹಿತವಾಗಿರುವ ಜೈವಿಕ ಸ್ಯಾನಿಟೈಸರ್ ಕೂಡಾ ಮಾರುಕಟ್ಟೆ ಪ್ರವೇಶಿಸಿದೆ. ಬೆಂಗಳೂರಿನ ಮಲ್ಟಿಪ್ಲೇಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ತಯಾರಿಸಿರುವ ಮಲ್ಟಿಪ್ಲೆಕ್ಸ್ ಶುದ್ಧಿ ಹ್ಯಾಂಡ್ ಸ್ಯಾನಿಟೈಸರ್ ಹೆಸರಿನ ಈ ಜೈವಿಕ ಸ್ಯಾನಿಟೈಸರ್ ಅಲ್ಕೋಹಾಲ್ ಅಂಶವನ್ನು ಒಳಗೊಂಡ ಇತರೆ ಎಲ್ಲಾ ಪಾರಂಪರಿಕ ಸ್ಯಾನಿಟೈಸರ್ ಗಳಿಗಿಂತಲೂ ಸುದೀರ್ಘ ಕಾಲ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಅಲ್ಲದೆ, ಆಲ್ಕೋಹಾಲ್ ಅಂಶವನ್ನು ಒಳಗೊಂಡ ಸ್ಯಾನಿಟೈಸರ್ ಗಳಿಗಿಂತಲೂ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಮಲ್ಟಿಪ್ಲೆಕ್ಸ್ ಶುದ್ಧಿ ಹ್ಯಾಂಡ್ ಸ್ಯಾನಿಟೈಜರ್ ನ 100 ಎಂಎಲ್ ಬಾಟಲಿಯ ಬೆಲೆ ಕೇವಲ ಐವತ್ತು ರೂ. ಮಾತ್ರ ಎಂಬುದು ಗಮನಾರ್ಹ.

ಕೊರೋನ ವೈರಾಣು ವ್ಯಾಪಿಸುತ್ತಿರುವ ಹಾಗೂ ಸಾಮಾಜಿಕ ಸ್ವಾಸ್ಥ್ಯದ ಈ ತುರ್ತು ಪರಿಸ್ಥಿತಿಯಲ್ಲಿ ರ್ಸಾಜನಿಕರಿಗೆ, ಅದರಲ್ಲೂ, ಬಡಜನರು ಹಾಗೂ ಮಧ್ಯಮ ವರ್ಗದವರಿಗೆ, ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಜೈವಿಕ ಸ್ಯಾನಿಟೈಸರ್ ( ಬಯೋ ಆಗ್ರ್ಯಾನಿಕ್ ) ಅನ್ನು ಮಲ್ಟಿಪ್ಲೇಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಹೊರತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News