ಬೆಳಗಾವಿ: ಇಂಡೋನೇಷ್ಯದ 10 ಮಂದಿ ಧರ್ಮ ಪ್ರಚಾರಕರು ಕ್ವಾರಂಟೈನ್‍ನಲ್ಲಿ

Update: 2020-04-01 16:44 GMT

ಬೆಳಗಾವಿ, ಎ.1: ನಗರಕ್ಕೆ ಬಂದಿರುವ ಇಂಡೋನೇಷ್ಯದ ತಬ್ಲೀಗ್ ಜಮಾತ್‍ನ 10 ಜನ ಧರ್ಮ ಪ್ರಚಾರಕರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ.

ಇವರೆಲ್ಲಾ ಇಂಡೋನೇಷ್ಯದಿಂದ ದೆಹಲಿಗೆ ಬಂದು, ದೆಹಲಿಯ ಬಂಗ್ಲೆವಾಲಿ ಮಸೀದಿಯ ನಿಝಾಮುದ್ದಿನ್ ಮರ್ಕಝ್ ನಲ್ಲಿ ನಡೆದ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು. ನಂತರ ಬಂಗ್ಲೆವಾಲಿ ಮಸೀದಿಯ ಧಾರ್ಮಿಕ ಮುಖಂಡರ ಆದೇಶದ ಮೇರೆಗೆ ಬೆಂಗಳೂರಿಗೆ ಬಂದು, ಅಲ್ಲಿನ ಧಾರ್ಮಿಕ ಮುಖಂಡರ ಸೂಚನೆ ಮೇರೆಗೆ ಬೆಳಗಾವಿ ಜಿಲ್ಲೆಯಲ್ಲಿ ಧರ್ಮಪ್ರಚಾರ ಕೈಗೊಂಡಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಲಾಕ್‍ಡೌನ್ ಘೋಷಣೆ ಸಂದರ್ಭದಲ್ಲಿ ಇವರೆಲ್ಲರೂ ಬೆಳಗಾವಿಯಲ್ಲಿ ಉಳಿದಿದ್ದಾರೆ. ಹೀಗಾಗಿ ಅವರನ್ನು ಮಸೀದಿಯೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕೊರೋನ ವೈರಸ್ ಸೋಂಕು ಸಂಬಂಧಿಸಿದ ಯಾವುದೇ ಲಕ್ಷಣ ಅವರಲ್ಲಿ ಕಂಡು ಬಂದಿಲ್ಲ. ಕ್ವಾರಂಟೈನ್ ಅವಧಿ ಮುಕ್ತಾಯಗೊಂಡಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ಅವರೆಲ್ಲರ ಪಾಸ್ ಪೋರ್ಟ್‍ಗಳನ್ನು ಬೆಳಗಾವಿ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News