ದೇವಾಲಯಗಳಲ್ಲಿ ಮಂತ್ರ ಪಠಣ ಮಾಡಿ ಕೊರೋನ ಓಡಿಸಿ: ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ

Update: 2020-04-01 16:47 GMT

ಬೆಂಗಳೂರು, ಎ.1: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ದೇವಾಲಯಗಳಲ್ಲಿ ಮಹಾ ಮೃತ್ಯುಂಜಯ ಮಂತ್ರ ಪಠಣ ಮಾಡಲಿ ಎಂದು ವಿಧಾನ ಪರಿಷತ್ತಿನ ಜೆಡಿಎಸ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ.

ಪ್ರತಿದಿನ ದೇವಸ್ಥಾನಗಳಲ್ಲಿ 8 ಗಂಟೆಗೆ ಸರಿಯಾಗಿ ಅಥವಾ ಅನುಕೂಲವಾಗುವಂತಹ ಒಂದೇ ಸಮಯದಲ್ಲಿ ಐದು ನಿಮಿಷಗಳ ಕಾಲ ಮಹಾ ಮೃತ್ಯುಂಜಯ ಮಂತ್ರ ಹಾಗೂ ಓಂಕಾರವನ್ನು ಕೇಳಬೇಕು, ಸಾಧ್ಯವಾದರೆ ಜೋರಾಗಿ ಹಾಕಬೇಕು. ಆಗ ಅತ್ಯುತ್ತಮವಾದ ಸಕಾರಾತ್ಮಕ ವಾಯುಮಂಡಲ ನಿರ್ಮಾಣವಾಗುತ್ತದೆ. ಅದೇ ಸಮಯದಲ್ಲಿ ಜನರು ಕೂಡ ಮನೆಯಲ್ಲಿ ಅದೇ ಮಂತ್ರವನ್ನು ಜಪಿಸುವುದರಿಂದ ಅವರಲ್ಲಿರುವ ಭಯ, ದುಗುಡ, ಆತಂಕ ಕಡಿಮೆಯಾಗುವುದು. ನಮ್ಮ ಜಪ, ತಪ, ಮಂತ್ರಗಳಲ್ಲಿ ಅತ್ಯದ್ಭುತವಾದ ಶಕ್ತಿಯಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News