ಸೋಮವಾರಪೇಟೆ: ಯಡವನಾಡು ಮೀಸಲು ಅರಣ್ಯದ ನೂರಾರು ಎಕರೆ ಭೂಮಿ ಬೆಂಕಿಗಾಹುತಿ

Update: 2020-04-01 17:20 GMT

ಸೋಮವಾರಪೇಟೆ, ಎ.1: ಅಪರೂಪದ ಪ್ರಾಣಿ ಪಕ್ಷಿಗಳಿರುವ ಯಡವನಾಡು ಮೀಸಲು ಅರಣ್ಯದ ನೂರಾರು ಎಕರೆ ಭೂಮಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಕಾರೇಕೊಪ್ಪ ಗ್ರಾಮದ ಸಮೀಪದಲ್ಲಿ ನೂರಾರು ಎಕರೆ ಅರಣ್ಯ ಹೊತ್ತಿ ಉರಿದಿದೆ. ಕಾರೇಕೊಪ್ಪದಿಂದ ಯಡವನಾಡು ಗ್ರಾಮದ ವರೆಗೂ ಪ್ರಾಣಿ, ಪಕ್ಷಿಗಳು, ಬೆಲೆಬಾಳುವ ಮರಗಳು ಸುಟ್ಟು ಕರಕಲಾಗಿವೆ. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಎಸಿಎಫ್ ನೆಹರು, ಆರ್‍ಎಫ್‍ಓ ಶಮಾ ಸ್ಥಳದಲ್ಲಿದ್ದು, ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಸೋಮವಾರಪೇಟೆ, ಕುಶಾಲನಗರ, ಮಡಿಕೇರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ಆರಿಸುವ ಪ್ರಯತ್ನ ಮುಂದುವರಿಸಿದ್ದಾರೆ.

ಕಾಡ್ಗಿಚ್ಚಿನಿಂದ ಅರಣ್ಯಕ್ಕೆ ಬೆಂಕಿ ಬೀಳದಂತೆ ಇಲಾಖೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಯಾರೋ ಕೀಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಒಂದು ಕಡೆಯಿಂದ ಬೆಂಕಿ ಆರಿಸಿದರೆ, ಇನ್ನೊಂದು ಕಡೆಯಿಂದ ಬೆಂಕಿ ಹಾಕುತ್ತಿರುವ ಸಂಶಯ ವ್ಯಕ್ತವಾಗುತ್ತಿದೆ. ಬೆಂಕಿ ಆರಿಸುವ ಪ್ರಯತ್ನ ಮುಂದುವರಿದಿದೆ ಎಂದು ಆರ್.ಎಫ್.ಒ ಶಮಾ ಘಟನಾ ಸ್ಥಳದಿಂದ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News