ಹಿರಿಯ ಧಾರ್ಮಿಕ ವಿದ್ವಾಂಸ ಮೌಲಾನಾ ಸಿರಾಜುಲ್ ಹಸನ್ ಸಾಹೇಬ್ ನಿಧನ

Update: 2020-04-02 13:04 GMT

ರಾಯಚೂರು,ಎ. 2: ಜಮಾಅತೆ ಇಸ್ಲಾಮಿ ಹಿಂದ್ ನ ಮಾಜಿ ರಾಷ್ಟ್ರೀಯ ಅಧ್ಯಕ್ಷ, ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಮಾಜಿ ಉಪಾಧ್ಯಕ್ಷ, ಹಿರಿಯ ಧಾರ್ಮಿಕ ವಿದ್ವಾಂಸ ಹಾಗು ಚಿಂತಕ ಮೌಲಾನಾ ಸಿರಾಜುಲ್ ಹಸನ್ ಸಾಹೇಬ್ ಅವರು ಗುರುವಾರ ಸಂಜೆ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 87ವರ್ಷ ವಯಸ್ಸಾಗಿತ್ತು. 

ಜಮಾಅತೆ ಇಸ್ಲಾಮಿ ಹಿಂದ್ ನ ರಾಜ್ಯಾಧ್ಯಕ್ಷರೂ ಆಗಿದ್ದ ಸಿರಾಜುಲ್ ಹಸನ್ ಅವರು ಸೌಮ್ಯ ಸ್ವಭಾವದ, ಸರಳ, ಸಜ್ಜನ ವ್ಯಕ್ತಿತ್ವದವರಾಗಿದ್ದರು. ರಾಷ್ಟ್ರೀಯ ಅಧ್ಯಕ್ಷರಾಗಿ ಸುದೀರ್ಘ 16 ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದರು. ಇತ್ತೀಚಿಗೆ ಅವರ ಪತ್ನಿ ನಿಧನರಾಗಿದ್ದರು. ಇಳಿವಯಸ್ಸಿನ ಕಾರಣ ಇತ್ತೀಚಿಗೆ ರಾಯಚೂರಿನಲ್ಲೇ ತನ್ನ ಹಿರಿಯ ಮಗನ ಜೊತೆ ಉಳಿದುಕೊಂಡಿದ್ದ ಅವರು ಅಲ್ಪ ಕಾಲದಿಂದ ಅಸೌಖ್ಯಕ್ಕೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News